ETV Bharat / state

ಕ್ಯಾನ್ಸರ್ ಬಗ್ಗೆ ಭಯಬೇಡ: ನನ್ನ ತಾಯಿಗೂ ಕ್ಯಾನ್ಸರ್ ಇತ್ತು: ಸಿಎಂ ಬೊಮ್ಮಾಯಿ

ಕ್ಯಾನ್ಸರ್‌ ರೋಗಕ್ಕೆ ಚಿಕಿತ್ಸೆ ನೀಡುವ ವೈದ್ಯರು, ಮಾನವೀಯತೆಯಿಂದ, ತಾಳ್ಮೆಯಿಂದ, ಕರುಣೆಯಿಂದ ನಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

CM Basavaraj Bommai Inaugurates new block of cancer hospital
ಕ್ಯಾನ್ಸರ್ ಆಸ್ಪತ್ರೆಯ ನೂತನ ಬ್ಲಾಕ್ ಉದ್ಘಾಟನೆ
author img

By

Published : Jan 10, 2023, 3:16 PM IST

ಕ್ಯಾನ್ಸರ್ ಬಗ್ಗೆ ಭಯಬೇಡ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಕ್ಯಾನ್ಸರ್ ಎನ್ನುವುದು ದೈಹಿಕವಾಗಿರುವ ಸವಾಲನ್ನು ಮಾನಸಿಕ ಒತ್ತಡಕ್ಕೆ ಸಿಲುಕಿಸುವ ಸ್ಥಿತಿ. ಕ್ಯಾನ್ಸರ್ ಎಂದ ತಕ್ಷಣ ಮನುಷ್ಯ ಮಾನಸಿಕ ಒತ್ತಡಕ್ಕೆ ಸಿಲುಕುತ್ತಾನೆ. ಇದರಿಂದ ಮನುಷ್ಯನ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ಯಾರಿಗೆ ಮಾನಸಿಕ ಶಕ್ತಿ ಧೃಡವಾಗಿವೆ, ದೈವಿಕ ಶಕ್ತಿಯಿದೆ ಅವರಿಗೆ ಕ್ಯಾನ್ಸರ್ ಗೆಲುವ ಶಕ್ತಿಯಿದೆ. ನಾನು ಬಹಳಷ್ಟು ಹತ್ತಿರದಿಂದ ಕ್ಯಾನ್ಸರ್ ನೋಡಿದ್ದೇನೆ. ನಮ್ಮ ತಾಯಿಗೆ ಕ್ಯಾನ್ಸರ್ ಇತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

CM Basavaraj Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿಯ ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಡಾ. ಆರ್.ಬಿ ಪಾಟೀಲ್ ಕಂಚಿನ ಪುತ್ಥಳಿ ಹಾಗೂ ನೂತನ ಬ್ಲಾಕ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕ್ಯಾನ್ಸರ್ ಬಗ್ಗೆ ಯಾರೂ ಭಯಪಡಬೇಕಿಲ್ಲ. ಕ್ಯಾನ್ಸರ್​​ನೊಂದಿಗೆ ಜನ ಬದುಕಬೇಕಿದೆ. ಕ್ಯಾನ್ಸರ್‌ ರೋಗಕ್ಕೆ ಚಿಕಿತ್ಸೆ ನೀಡುವ ವೈದ್ಯರು, ಮಾನವೀಯತೆಯಿಂದ, ತಾಳ್ಮೆಯಿಂದ, ಕರುಣೆಯಿಂದ ನಡೆದುಕೊಳ್ಳಬೇಕು. ಈ ಹಿಂದೆ ಹುಬ್ಬಳ್ಳಿಯಲ್ಲಿ ಒಳ್ಳೆಯದನ್ನು ಬಯಸುವ ನಿಟ್ಟಿನಲ್ಲಿ ಒಂದು ನಾಗರಿಕ ಸಮಾಜ ಹುಟ್ಟಿಕೊಂಡಿತ್ತು. ಆದರೆ, ಈಗ ಹುಬ್ಬಳ್ಳಿ ಬಹಳಷ್ಟು ಬೆಳೆದಿದೆ. ಆದರೆ ನಾಗರಿಕ ಸಮಾಜ ಮರೆಯಾಗಿದೆ. ಉತ್ತರ ಕರ್ನಾಟಕದ ರೈತರು, ಯುವಕರು ಹೆಚ್ಚು ಸಿಗರೇಟ್, ತಂಬಾಕು ಸೇವನೆ ಮತ್ತು ಆಹಾರ ಪದ್ದತಿಯಿಂದ ಕ್ಯಾನ್ಸರ್ ಹೆಚ್ಚಾಗಿದೆ ಎಂದರು.

ಸಂಶೋಧನಾ ಕೇಂದ್ರವಾಗಿ ಬೆಳೆಯಬೇಕು: ಹುಬ್ಬಳ್ಳಿಯ ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಸಂಶೋಧನಾ ಕೇಂದ್ರವಾಗಿ ಮಾರ್ಪಾಡಾಗಬೇಕು. ಇದಕ್ಕೆ ಸರ್ಕಾರದ ಸಹಕಾರ ಇದ್ದೇ ಇದೆ. ಪದ್ಮಶ್ರೀ ಆರ್.ಬಿ. ಪಾಟೀಲ್​​ ಅವರು ಜನಸಾಮಾನ್ಯರಿಗೆ ಒಳ್ಳೆ ಚಿಕಿತ್ಸೆ ನೀಡುತ್ತಿದ್ದರು. ಕ್ಯಾನ್ಸರ್ ಚಿಕಿತ್ಸೆಗೆ ಬಾಂಬೆ, ಬೆಂಗಳೂರಿಗೆ ಹೋಗುವ ಅನಿವಾರ್ಯತೆ ಇತ್ತು. ಆಗ ಹಲವರು ಸೇರಿ ಹುಬ್ಬಳ್ಳಿಯಲ್ಲೇ ಆಸ್ಪತ್ರೆ ತೆರೆದರು.

ಸಿಎಂ ಬೊಮ್ಮಾಯಿ ಭಾವುಕ ಮಾತು: ನಿಮ್ಮ ಜೊತೆಗೆ ಬೆಳೆದ ಹುಡುಗ ಈಗ ಮುಖ್ಯಮಂತ್ರಿ ಆಗಿದ್ದಾನೆ. ಹುಬ್ಬಳ್ಳಿ ಜನ ಇನ್ನೂ ಆಕ್ಟೀವ್ ಆಗಬೇಕು. ನಾನು ಏನೇನು ಕೆಲಸ ಮಾಡಿದ್ದೇನೆ ಅಂತ ನೋಡಬೇಕು. ಒಳ್ಳೆಯದನ್ನು ಮಾಡಿದ್ರೆ ಬೆನ್ನು ತಟ್ಟಬೇಕು. ‌ಕೆಡಕು ಮಾಡಿದರೆ ಕಿವಿ ಹಿಂಡಬೇಕು. ಬೇರೆ ಎಲ್ಲರೂ ನಮ್ಮನ್ನ ಹೊಗಳುತ್ತಾರೆ. ಆದರೆ, ಹುಬ್ಬಳ್ಳಿಯ ಹಿರಿಯರು ನಮ್ಮನ್ನ ತಿದ್ದಬೇಕು ಎಂದು ಸಿಎಂ ಬೊಮ್ಮಾಯಿ ಭಾವುಕರಾದರು.

ಹುಬ್ಬಳ್ಳಿಗೆ ಜಯದೇವ ಇನ್ಸ್ಟಿಟ್ಯೂಟ್: ಹುಬ್ಬಳ್ಳಿಗೆ ಜಯದೇವ ಇನ್ಸ್ಟಿಟ್ಯೂಟ್ ಮಂಜೂರಾಗಿದೆ. ಈಗಾಗಲೇ 250 ಕೋಟಿ ರೂ. ಬಿಡುಗಡೆ ಆಗಿದೆ. ಮುಂದಿನ ತಿಂಗಳು ಅಡಿಗಲ್ಲು ಸಮಾರಂಭ ಮಾಡಲಿದ್ದೇವೆ. ಅದಕ್ಕೆ ಇನ್ನೂ 250 ಕೋಟಿ ಬಿಡುಗಡೆ ಮಾಡಲಾಗುವುದು. ಡಾ.ಆರ್.ಬಿ.ಪಾಟೀಲ್​ ಅವರ ಕನಸಿನಂತೆ ನಮ್ಮ ಅನುದಾನ ಉಪಯೋಗ ಆಗಲಿದೆ. ಚಿಕಿತ್ಸೆಗೆ ಬೇಕಾದ ಹಲವು ಬೇಡಿಕೆ ಇಟ್ಟಿದ್ದಾರೆ. ಸಿಎಸ್​ಆರ್​ ಫಂಡ್ ಮೂಲಕ 5 ಕೋಟಿ ರೂ.ನೀಡುತ್ತೇನೆ. ಎಲ್ಲ ರೀತಿಯಲ್ಲೂ ಸರ್ಕಾರದಿಂದ ಬೆಂಬಲ ಈ ಆಸ್ಪತ್ರೆಗೆ ಇದೆ. ಕ್ಯಾನ್ಸರ್ ಚಿಕಿತ್ಸೆಗೆ ಬಿಪಿಎಲ್​, ಆಯುಷ್ಮಾನ್ ಫಲಾನುಭವಿಗಳ ಅನುಕೂಲಕ್ಕಾಗಿ ತಕ್ಷಣ ಆರ್ಡರ್ ಮಾಡುತ್ತೇನೆ. ಎಲ್ಲ ಉದ್ಯಮಿಗಳು ಈ ಕ್ಯಾನ್ಸರ್ ಸಂಸ್ಥೆಗೆ ಹಣ ಸಹಾಯ ಮಾಡಬೇಕು. ಹಿರಿಯ ಉದ್ಯಮಿಗಳು ಈ ಆಸ್ಪತ್ರೆಗೆ ಸಹಾಯ ಮಾಡಿದ್ದಾರೆ. ಅವರ ಮಕ್ಕಳು ಕೂಡ ಹಣ ಸಹಾಯದ ಪರಂಪರೆಯನ್ನ ಮುಂದುವರೆಸಬೇಕು ಎಂದು ಸಿಎಂ ಬೊಮ್ಮಾಯಿ ಮನವಿ ಮಾಡಿದರು.

ಇದನ್ನೂ ಓದಿ: ಸ್ಯಾಂಟ್ರೊ ರವಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.