ETV Bharat / state

ಗೋಡಾ ಹೈ ಮೈದಾನ್‌ ಭೀ ಹೈ.. ಪೊಲೀಸ್ ಕಮಿಷನರ್​​ಗಳು ಫೀಲ್ಡ್​ಗಿಳಿದು ಕೆಲಸ ಮಾಡಿ : ಸಿಎಂ ಖಡಕ್​​ ಸೂಚನೆ - ಪೊಲೀಸ್ ಕಮಿಷನರ್​​ಗಳಿಗೆ ಸಿಎಂ ಸೂಚನೆ

ಹುಬ್ಬಳ್ಳಿ-ಧಾರವಾಡ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಕೆಲ‌ ಕಿಡಿಗೇಡಿಗಳು ಮಾಡುತ್ತಿದ್ದಾರೆ. ಅವರನ್ನು ನಿಯಂತ್ರಿಸುವುದು ಕಷ್ಟವಲ್ಲ..

CM Basavaraj Bommai directs
ಸಿಎಂ ಬಸವರಾಜ ಬೊಮ್ಮಾಯಿ
author img

By

Published : Sep 27, 2021, 3:14 PM IST

Updated : Sep 27, 2021, 3:40 PM IST

ಹುಬ್ಬಳ್ಳಿ : ಪೊಲೀಸ್ ಕಮಿಷನರ್​​ಗಳು ಹಾಗೂ ಹಿರಿಯ ಅಧಿಕಾರಿಗಳು ಫೀಲ್ಡ್​​ಗೆ ಇಳಿದು ಕೆಲಸ ಮಾಡಬೇಕು.‌ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದು ಬೇಡ ಎಂದು ಸಿಎಂ ಬಸವರಾಜ ಬೊಮ್ಮಾಯಿ ಖಡಕ್ ಸೂಚನೆ ನೀಡಿದರು.

ಪೊಲೀಸ್ ಕಮಿಷನರ್​​ಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಸಿಎಂ ಸೂಚನೆ..

ನಗರದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಪೊಲೀಸ್ ಕಾರ್ಯದಕ್ಷತೆ ಬಗ್ಗೆ ಪಾಠ ಮಾಡಿದ ಸಿಎಂ, ಕಚೇರಿಯಲ್ಲಿ ಕುಳಿತು ಆಡಳಿತ ಕೆಲಸ ಮಾಡುವುದಷ್ಟೇ ಪೊಲೀಸರ ಕರ್ತವ್ಯವಲ್ಲ. ಫೀಲ್ಡ್​​ಗೆ ಇಳಿದು ಕಮಿಷನರ್, ಡಿಸಿಪಿಗಳು ಕೆಲಸ ಮಾಡಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಸಲಹೆ ನೀಡಿದರು.

ಕೆಳ ಹಂತದ ಕಾರ್ಯವೈಖರಿ ತಿಳಿಯಲು ಹಿರಿಯ ಅಧಿಕಾರಿ ಠಾಣೆಗಳಿಗೆ ಹೋಗಿ ಕುಳಿತುಕೊಳ್ಳಬೇಕು. ಹುಬ್ಬಳ್ಳಿ-ಧಾರವಾಡದಲ್ಲಿ ಇತ್ತೀಚೆಗೆ ಕ್ರೈಂ ಪ್ರಕರಣ ಹೆಚ್ಚುತ್ತಿವೆ. ಐದಾರು ಠಾಣೆಗಳ ಕಾರ್ಯವೈಖರಿ ಬದಲಾಗಬೇಕಿದೆ. ಹುಬ್ಬಳ್ಳಿ-ಧಾರವಾಡ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಕೆಲ‌ ಕಿಡಿಗೇಡಿಗಳು ಮಾಡುತ್ತಿದ್ದಾರೆ. ಅವರನ್ನು ನಿಯಂತ್ರಿಸುವುದು ಕಷ್ಟವಲ್ಲ ಎಂದರು.

17 ಸಾವಿರ ಪೊಲೀಸ್ ಹಾಗೂ ಪಿಎಸ್​​ಐ ನೇಮಕಾತಿ ನಡೆಯುತ್ತಿದೆ. ಎನ್​​ಡಿಎ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಮಾದರಿಯಲ್ಲಿ ರಾಜ್ಯದ ಡಿವೈಎಸ್​​ಪಿ ರ್‍ಯಾಂಕ್‌ ಅಧಿಕಾರಿಗಳಿಗೆ ತರಬೇತಿ ನೀಡಲು ನಾವು ಮುಂದಾಗಿದ್ದೇವೆ ಎಂದರು.

ನನಗೆ ಹುಬ್ಬಳ್ಳಿಯ ಪ್ರತಿ ಗಲ್ಲಿ ಗಲ್ಲಿಯೂ ಗೊತ್ತು. ಎಲ್ಲರೂ ಸೇರಿ‌ ಒಳ್ಳೆಯ ಕೆಲಸ ಮಾಡೋಣ. 60 ತಿಂಗಳಲ್ಲಿ 59 ತಿಂಗಳು ಅಭಿವೃದ್ಧಿ ಮಾಡೋಣ. ಒಂದು ತಿಂಗಳು ಮಾತ್ರ ರಾಜಕಾರಣ ಮಾಡೋಣ. 'ಗೋಡಾ ಹೈ- ಮೈದಾನ ಬೀ ಹೈ' ಎಂದು ಹಿಂದಿ ಡೈಲಾಗ್ ಹೊಡೆದು ಅಭಿವೃದ್ದಿಗೆ ಮಹತ್ವ ನೀಡೋಣ ಎಂದರು.

ಇದನ್ನೂ ಓದಿ: Live video: ಬೆಂಗಳೂರಿನಲ್ಲಿ ನೋಡ ನೋಡುತ್ತಿದ್ದಂತೆ ಕಟ್ಟಡ ಕುಸಿತ.. ಸ್ವಲ್ಪದರಲ್ಲೇ ತಪ್ಪಿದ ಅನಾಹುತ

Last Updated : Sep 27, 2021, 3:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.