ಹುಬ್ಬಳ್ಳಿ: ನೂರಾರು ಕನಸು ಕಂಡಿದ್ದ ಬಾಲಕನ ಬದುಕನ್ನು ಹುಬ್ಬಳ್ಳಿಯ ಚೇತನಾ ಕಾಲೋನಿಯಲ್ಲಿರುವ ಕಟ್ಟಡ ದುಸ್ತರಗೊಳಿಸಿದೆ. 2018 ಸೆಪ್ಟೆಂಬರ್ 25 ರಂದು ಸ್ನೇಹಿತರ ಜೊತೆ ಆಟವಾಡುತ್ತಿದ್ದ ಬಾಲಕ, ನೀರು ಕುಡಿಯಲು ಸ್ನೇಹಿತನ ಮನೆಗೆ ಹೋಗಿದ್ದಾನೆ. ಕಟ್ಟಡದ ಮೆಟ್ಟಿಲುಗಳ ಸಮೀಪ ಹಾದು ಹೋಗಿದ್ದ 9 ಕೆವಿ ವಿದ್ಯುತ್ ಲೈನ್ ತಗುಲಿ ಶಾಕ್ ಹೊಡೆದಿದೆ.
ಇದರ ಪರಿಣಾಮ, ಬಾಲಕನ ಕೈ-ಕಾಲು, ದೇಹವೆಲ್ಲ ಸುಟ್ಟು ಕರಕಲಾಗಿತ್ತು. ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಬಾಲಕನಿಗೆ ಇದುವರೆಗೆ 20 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಕುರಿತಂತೆ ಸೆ.1 ರಂದು ಈಟಿವಿ ಭಾರತ ಬಾಲಕನ ಕಣ್ಣೀರ ಕಥೆಯ ಸುದ್ದಿಯನ್ನು ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ಅನಧಿಕೃತ ಕಟ್ಟಡದ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಸಾವಿರಾರು ಕನಸು ಕಂಡಿದ್ದ ಬಾಲಕನ ಜೀವನ ಅನಧಿಕೃತ ಕಟ್ಟಡದಿಂದ ಕಮರಿ ಹೋಗಿದ್ದು ಅಂಗವಿಕಲನಾಗಿದ್ದಾನೆ. ಸಿದ್ದಾರ್ಥ ಬಳ್ಳಾರಿ ಎಂಬ ಬಾಲಕನೆ ಅನಧಿಕೃತ ಕಟ್ಟಡದಿಂದ ಅಂಗವಿಕನಾಗಿದ್ದ, ಅಲ್ಲದೇ ಅವನ ತಂದೆ ಮಂಜುನಾಥ ಬಳ್ಳಾರಿ ಈ ಬಗ್ಗೆ ಹೋರಾಟ ನಡೆಸಿದ್ದರು. ಕೊನೆಗೆ ಮಹಾನಗರ ಪಾಲಿಕೆ ಅಧಿಕಾರಿಗಳಿ ಈಗ ಬಾಲಕನಿಗೆ ಬದುಕಿಗೆ ಕಂಟಕವಾಗಿದ್ದ ಕಟ್ಟಡವನ್ನು ತೆರವುಗೊಳಿಸುವ ಕಾರ್ಯಾಚರಣೆ ಮಾಡುತ್ತಿದ್ದಾರೆ.