ಹುಬ್ಬಳ್ಳಿ: ವಾಯ್ಕೆ ಸಿನಿ ಕ್ರಿಯೇಷನ್ಸ್ ನಿರ್ಮಾಣದ ‘ಛೋಟಾ ಬಾಂಬೆ’ ಸಿನಿಮಾದ ಧ್ವನಿ ಸುರುಳಿ ಬಿಡುಗಡೆ ಇಂದು ಸಂಜೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಯೂಸುಫ್ ಖಾನ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದ ಚಿತ್ರದ ನಿರ್ಮಾಣ ಮಾಡಿದ್ದು, ಇದೀಗ ಚಿತ್ರ ಕಂಪ್ಲೀಟ್ ಆಗಿದೆ. ಚಿತ್ರದ ಧ್ವನಿ ಸುರುಳಿ ಕಾರ್ಯಕ್ರಮಕ್ಕೆ ಶಾಸಕ ಪ್ರಸಾದ್ ಅಬ್ಬಯ್ಯ, ಅಮೃತ ದೇಸಾಯಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅತಿಥಿಗಳಾಗಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಕಾಂಗ್ರೆಸ್ ಮುಖಂಡ ನಾಗರಾಜ ಛಬ್ಬಿ ಸೇರಿದಂತೆ ಮುಂತಾದ ಗಣ್ಯರು ಆಗಮಿಸಲಿದ್ದಾರೆ ಎಂದರು.
ಇದನ್ನೂ ಓದಿ: ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ 'ಯುವರತ್ನ' ಚಿತ್ರ ತಂಡಕ್ಕೆ ದಂಡ
‘ಛೋಟಾ ಬಾಂಬೆ’ ಸಿನಿಮಾ ಹುಬ್ಬಳ್ಳಿ ಇತಿಹಾಸ ತಿಳಿಸುವ ಚಿತ್ರವಾಗಿದ್ದು, ಯಾವ ರೀತಿ ಹೂಬಳ್ಳಿ ಹುಬ್ಬಳ್ಳಿಯಾಗಿ ಪರಿವರ್ತನೆಯಾಯಿತು, ಅಲ್ಲದೇ ಮತ್ತೆ ಹುಬ್ಬಳ್ಳಿ ಹೂಬಳ್ಳಿಯಾಗಿ ಪರಿವರ್ತನೆಗೊಂಡಾಗ ಯಾವ ರೀತಿ ಇರಲಿದೆ ಎಂಬುದನ್ನು ತೋರಿಸಲಾಗಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಹುಬ್ಬಳ್ಳಿ - ಧಾರವಾಡ, ದಾಂಡೇಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಡುಗಳ ಚಿತ್ರೀಕರಣ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರದ ನಾಟಕ ನಟ ಸೂರಜ್ ಸವಣೂರು, ಅಭಿಷೇಕ ಜಾಲಿಹಾಳ, ದೀಪಕ್ ಬೊಂಗಾಳೆ, ಎಮ್, ಹೆಚ್.ಶೇಕ್, ಶಿವು ಬೆರ್ಗಿ ಸೇರಿದಂತೆ ಮುಂತಾದವರು ಇದ್ದಾರೆ.