ETV Bharat / state

ಗಡಿಯಲ್ಲಿ ದೇಶ ಕಾಯೋ ಯೋಧ.. ಊರಲ್ಲಿ ಒಂದಲ್ಲ, ಎರಡಲ್ಲ ಮೂರು ಮದುವೆಯಾಗಿ ವಂಚಿಸಿದ ಭೂಪ! - ಗಡಿಯಲ್ಲಿ ದೇಶ ಕಾಯೋ ಯೋಧ

ಯೋಧನೋರ್ವ ಮೂರು ಮದುವೆಯಾಗಿ ಮೋಸ ಮಾಡಿರುವ ಆರೋಪ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಇದೀಗ ಆತನ ಮೊದಲ ಹಾಗೂ ಎರಡನೇ ಪತ್ನಿಯರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

Cheating case registered against hubli soldier
ಮಹಿಳೆಯರನ್ನು ವಂಚಸಿದ ಯೋಧ
author img

By

Published : Nov 8, 2021, 2:03 PM IST

Updated : Nov 8, 2021, 2:26 PM IST

ಹುಬ್ಬಳ್ಳಿ : ಸೇನೆಯಲ್ಲಿ ಸೇವೆ ಸಲ್ಲಿಸುವ ಯೋಧರಿಗೆ ಸಾರ್ವಜನಿಕರು ಅತ್ಯಂತ ಗೌರವದಿಂದ ಕಾಣುತ್ತಾರೆ. ಆದರೆ ಹುಬ್ಬಳ್ಳಿಯಲ್ಲಿನ ಯೋಧನೋರ್ವ ಮೂರು ಮದುವೆಯಾಗಿದ್ದು, ಆತನಿಂದ ಮೋಸ ಹೋದ ಮೊದಲ ಹಾಗೂ ಎರಡನೇ ಪತ್ನಿಯರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮೋಸ ಹೋದ ಮಹಿಳೆ ರೇಖಾ ಪ್ರತಿಕ್ರಿಯೆ

ಹುಬ್ಬಳ್ಳಿ ತಾಲೂಕಿನ ನೆಲವಡಿ ಗ್ರಾಮದ ನಿವಾಸಿ ಗುರುಸಿದ್ದಪ್ಪ ಶಿರೋಳ ಎಂಬಾತ ಪಂಜಾಬಿನಲ್ಲಿ ಬಿಎಸ್ಎಫ್ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುಟುಂಬಸ್ಥರೇ ನಿಶ್ಚಯಿಸಿ 2015 ರಲ್ಲಿ ಗುರುಸಿದ್ದಪ್ಪನಿಗೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದ ರೇಖಾ ಎಂಬುವರೊಂದಿಗೆ ಮದುವೆ ಮಾಡಿದ್ದರು. ಇವರಿಗೆ ಓರ್ವ ಮಗ ಕೂಡ ಇದ್ದಾನೆ. ಆದ್ರೆ ಮೊದಲ ಪತ್ನಿ ರೇಖಾ ಜೊತೆ ಗುರುಸಿದ್ದಪ್ಪ ಕಿರಿಕ್ ಮಾಡಿಕೊಂಡಿದ್ದ. ಪತಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾನೆ. ಆತನೊಂದಿಗೆ ಜೀವನ ನಡೆಸಲು ಆಗಲ್ಲ ಎಂದು ರೇಖಾ ಮಗುವಿನ ಜೊತೆ ತವರು ಸೇರಿದ್ದರು.

ಇತ್ತ ಮೊದಲ ಪತ್ನಿ ರೇಖಾ ತವರು ಮನೆ ಸೇರುತ್ತಿದ್ದಂತೆ ಗುರುಸಿದ್ದಪ್ಪ, ಮ್ಯಾಟ್ರಿಮೋನಿಯಲ್ಲಿ ಮಂಜುಳಾ ಎಂಬುವರನ್ನು ಪರಿಚಯ ಮಾಡಿಕೊಂಡಿದ್ದನು. ಮದುವೆಯಾದ ವಿಚಾರವನ್ನು ಬಚ್ಚಿಟ್ಟು ಆಕೆಯೊಂದಿಗೆ ಬಾಡಿಗೆ ಮನೆಯಲ್ಲಿ ಗುಟ್ಟಾಗಿ ಸಂಸಾರ ನಡೆಸುತ್ತಿದ್ದನು. ಇಷ್ಟಕ್ಕೆ ಗುರುಸಿದ್ದಪ್ಪನ ರಂಗೀನಾಟ ನಿಂತಿಲ್ಲ. ಮಂಜುಳಾ ನಂತರ ಸುಧಾ ಎಂಬುವರನ್ನು ಸಹ ಮೋಸ ಮಾಡಿ ಮದುವೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

complaint copy
ದೂರಿನ ಪ್ರತಿ

ಪತಿಯ ಮೊದಲ ಮತ್ತು ಮೂರನೇ ಮದುವೆ ವಿಷಯ ತಿಳಿದ ಮಂಜುಳಾ, ಪತಿ ಗುರುಸಿದ್ದಪ್ಪ ತನ್ನನ್ನು ಮೋಸದಿಂದ ವಿವಾಹವಾಗಿದ್ದಾನೆ ಎಂದು ಆರೋಪಿಸಿ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗುರುಸಿದ್ದಪ್ಪನ ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇತ್ತ ಮೊದಲ ಹೆಂಡತಿ ಮದುವೆ ಆಗಿ ತವರು ಮನೆ ಸೇರಿದ್ದು, ನ್ಯಾಯಕ್ಕಾಗಿ ಅಲೆದಾಟ ನಡೆಸಿದ್ದಾರೆ. ಇದರ ನಡುವೆ ಗುರುಸಿದ್ದಪ್ಪ ಇದೇ ವರ್ಷ ಸುಧಾ ಎಂಬುವವರ ಜೊತೆ ಮೂರನೇ ಮದುವೆಯಾಗಿದ್ದಾನೆ. ಇದೆಲ್ಲವೂ ಮೊದಲಿಬ್ಬರು ಹೆಂಡತಿಯರಿಗೆ ಗೊತ್ತಾಗಿದ್ದು, ಇದೀಗ ನಮಗೆ ಆದಂತಹ ಮೋಸ ಮತ್ಯಾರಿಗೂ ಆಗಬಾರದು ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ದೇಶದ ಸೇನೆಯಲ್ಲಿದ್ದುಕೊಂಡು ಗುರುಸಿದ್ದಪ್ಪ ಮೂವರಿಗೂ ಮೋಸ ಮಾಡಿದ್ದಾನೆ. ಮೂರು ಮದುವೆಯಾಗಿ ಪ್ರತ್ಯೇಕ ಮನೆಗಳಲ್ಲಿದ್ದುಕೊಂಡು ಅವರ ಜೊತೆ ದೈಹಿಕ ಸಂಪರ್ಕ ಹೊಂದಿದ ಬಳಿಕ ಕೈ ಕೊಡುವ ಕೆಲಸ ಮಾಡುತ್ತಿದ್ದಾನೆ ಎಂದು ಮೋಸ ಹೋದ ಮಹಿಳೆಯರು ಆರೋಪಿಸಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ರಿಯಲ್ ಎಸ್ಟೇಟ್ ಉದ್ಯಮಿಗೆ ಪರಲೋಕ ದರ್ಶನ.. ಪೊಲೀಸರಿಗೆ ಶರಣಾದ್ಲು ನೆಲಮಂಗಲದ ಸುರಸುಂದರಾಗಿ

Last Updated : Nov 8, 2021, 2:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.