ETV Bharat / state

ಹುಬ್ಬಳ್ಳಿ ಚನ್ನಮ್ಮ ವೃತ್ತದ ಮೇಲು ರಸ್ತೆ, ಕಲಘಟಗಿ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಶಿಲಾನ್ಯಾಸ

ಇಂದು ಹುಬ್ಬಳ್ಳಿಯ ಡೆನಿಸನ್ ಹೋಟೆಲ್​​​ನಲ್ಲಿ ಚನ್ನಮ್ಮ ವೃತ್ತದ ಮೇಲು ರಸ್ತೆ ಹಾಗೂ ಕಲಘಟಗಿ ಚತುಷ್ಪಥ ಹೆದ್ದಾರಿ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಚತುಷ್ಪಥ ಹೆದ್ದಾರಿ ನಿರ್ಮಾಣ ಶಿಲಾನ್ಯಾಸ
Central Minister Nitin Gadkari inaugurates flyover work in hubli
author img

By

Published : Jan 15, 2021, 1:07 PM IST

ಹುಬ್ಬಳ್ಳಿ: ಸುಮಾರು 298 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಚನ್ನಮ್ಮ ವೃತ್ತದ ಮೇಲು ರಸ್ತೆ ಹಾಗೂ ಕಲಘಟಗಿ ಚತುಷ್ಪಥ ಹೆದ್ದಾರಿ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ಕೆ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.

ಹುಬ್ಬಳ್ಳಿಯಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮ

ಇಂದು ನಗರದ ಡೆನಿಸನ್ ಹೋಟೆಲ್​​​ನಲ್ಲಿ ನಡೆದ ಫ್ಲೈ ಓವರ್ ಕಾಮಗಾರಿಯ ಉದ್ಘಾಟನೆಯ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಕಾಮಗಾರಿಗೆ ಚಾಲನೆ ನೀಡಿದರು. ಈ ವೇಳೆ ಸಿಎಂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಜಗದೀಶ್​​ ಶೆಟ್ಟರ್, ಸದಾನಂದ ಗೌಡ, ಶಾಸಕ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಬಸವರಾಜ ಹೊರಟ್ಟಿ, ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಸಚಿವ ಹಾಗೂ ನಿವೃತ್ತ ಸೇನಾಧಿಕಾರಿ ಡಾ. ವಿ.ಕೆ. ಸಿಂಗ್, ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಎಂ. ಕಾರಜೋಳ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಭಾಗವಹಿಸಿದ್ದರು.

Central Minister Nitin Gadkari inaugurates flyover work in hubli
ಹುಬ್ಬಳ್ಳಿಯಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮ

ಓದಿ: ಯಡಿಯೂರಪ್ಪಗೇ ಅಧಿಕಾರದ ವ್ಯಾಮೋಹ ಇರುವಾಗ ನನಗಿದ್ದರೆ ತಪ್ಪೇನು?: ಹಳ್ಳಿಹಕ್ಕಿ ಆಕ್ರೋಶ

ಸುಮಾರು 298 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 63, 218 ಹಾಗೂ 4 ನ್ನು ಸಂಪರ್ಕಿಸುವ 3.6 ಕಿಮೀ ಉದ್ದದ ಚನ್ನಮ್ಮ ವೃತ್ತದ ಮೇಲು ರಸ್ತೆ, 25 ಕೋಟಿ ವೆಚ್ಚದಲ್ಲಿ ಕಲಘಟಗಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ 2.77 ಕಿಮೀ ಚತುಷ್ಪಥ ರಸ್ತೆ ಹಾಗೂ ದಾಸ್ತಿಕೊಪ್ಪದ ಬಳಿ ಸೇತುವೆ ನಿರ್ಮಾಣಗಳ ಕಾಮಗಾರಿ ಇದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.