ಧಾರವಾಡ: ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮುಂದುವರೆದಿದೆ.
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಸೇರಿದಂತೆ ಪ್ರಮುಖ ಆರೋಪಿ ಬಸವರಾಜ ಮುತಗಿ, ಸಂದೀಪ ಸವದತ್ತಿ, ವಿಕ್ರಮ ಬಳ್ಳಾರಿ, ವಿನಾಯಕ ಕಟಗಿ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದೆ.
ಧಾರವಾಡ ಉಪನಗರ ಠಾಣೆಯಲ್ಲಿ ಸಿಬಿಐ ಅಧಿಕಾರಿಗಳು ಆರೋಪಿಗಳ ವಿಚಾರಣೆ ಮಾಡಿದ್ದಾರೆ. ಯೋಗೀಶ ಗೌಡ ಕೊಲೆ ಬೆನ್ನಲ್ಲೇ ಅವರ ಪತ್ನಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ಪ್ರಶ್ನೆ ಉದ್ಭವವಾಗಿದ್ದು, ರಾಜಿ ಸಂಧಾನದ ವ್ಯವಹಾರ ನಡೆಯುತ್ತಿರಬಹುದು ಎಂಬ ಗುಮಾನಿಯೂ ಶುರುವಾಗಿದೆ.
ಈ ಕುರಿತು ಸಿಬಿಐ ವಿಚಾರಣೆ ಮುಗಿಸಿ ಹೊರಬಂದ ಜಿ. ಪಂ. ಉಪಾಧ್ಯಕ್ಷ ಶಿವಾನಂದ ಕರಿಗಾರಿ ಪ್ರತಿಕ್ರಿಯಿಸಿದ್ದಾರೆ. ಯೋಗೀಶ್ ಗೌಡ ಪತ್ನಿ ಮಲ್ಲಮ್ಮ ಅವರು ನನಗೆ ಕರೆ ಮಾಡಿ ಬಿಜೆಪಿಯಿಂದ ಮೋಸವಾಗಿದೆ. ತಾನು ಕಾಂಗ್ರೆಸ್ ಸೇರಬೇಕು ಎಂದು ಕೇಳಿಕೊಂಡರು. ಅದಕ್ಕೆ ನಾನು ಪಕ್ಷದ ಮುಖಂಡರ ಜೊತೆ ಮಾತನಾಡಿ ಪಕ್ಷ ಸೇರ್ಪಡೆ ಮಾಡುವ ವ್ಯವಸ್ಥೆ ಮಾಡಿದ್ದೆ. ಅಷ್ಟು ಬಿಟ್ಟರೆ ಹಣದ ವ್ಯವಹಾರ, ರಾಜಿ ಸಂಧಾನದ ವಿಚಾರ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.