ಹುಬ್ಬಳ್ಳಿ: ರಾಜ್ಯದಲ್ಲಿ ಇತ್ತೀಚೆಗೆ ಗ್ರಾಮೀಣ ಕ್ರೀಡೆಗಳು ಮಾಯವಾಗುತ್ತಿವೆ. ಮೊಬೈಲ್ ಬಂದ ಮೇಲೆ ಅಂಗೈನಲ್ಲಿ ಎಲ್ಲ ಸಿಗುವ ತರಹ ಆಗಿದೆ. ಹೀಗಿರುವಾಗ ಚಕ್ಕಡಿ ಸ್ಪರ್ಧೆ, ಕಬಡ್ಡಿ, ಖೋಖೋ, ಭಜನೆ ಪದಗಳಂತಹ ಸ್ಪರ್ಧೆ ಅಲ್ಲೊಂದು ಇಲ್ಲೊಂದು ಕಡೆ ಆಯೋಜನೆ ಮಾಡುವುದನ್ನು ನೋಡಿದ್ದೇವೆ. ಇದೇ ತರಹ ಹುಬ್ಬಳ್ಳಿಯಲ್ಲಿ ಕಬ್ಬಿಣದ ಖಾಲಿ ಚಕ್ಕಡಿ ಓಡಿಸೋ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.
ಗ್ರಾಮೀಣ ಕ್ರೀಡೆ ಮರೆಯಾಗುವ ಸಮಯದಲ್ಲಿ ಹುಬ್ಬಳ್ಳಿಯ ಉಳವೇಶ್ವರ ದೇವಸ್ಥಾನದ ವತಿಯಿಂದ ಖಾಲಿ ಕಬ್ಬಿಣದ ಚಕ್ಕಡಿ ಓಡಿಸುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಒಂದು ನಿಮಿಷದ ಸಮಯದಲ್ಲಿ ಯಾರೂ ದೂರ ಚಕ್ಕಡಿ ಎಳೆಯುತ್ತಾರೋ ಅವರಿಗೆ ಬಹುಮಾನ ಕೊಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ನಗದು ಬಹಮಾನವೂ ಇತ್ತು. ಚಕ್ಕಡಿ ಸ್ಪರ್ಧೆಯಲ್ಲಿ ಬೈಲಹೊಂಗಲದಿಂದ ಬಂದ ಯುವಕ ಮೊದಲ ಸ್ಥಾನ ಪಡೆದು 10 ಸಾವಿರ ಬಹುಮಾನ ಗೆದ್ದು ಬೇಷ್ ಎನಿಸಿಕೊಂಡಿದ್ದಾನೆ.
ಇದನ್ನೂ ಓದಿ: ಮಗಳ ಮದ್ವೆ ಹೇಳಿಕೆ ಜೊತೆ ತರಕಾರಿ ಬೀಜದ ಪ್ಯಾಕೆಟ್; ಪೋಷಕರಿಂದ ಪರಿಸರ ಜಾಗೃತಿ ಸಂದೇಶ