ಹುಬ್ಬಳ್ಳಿ: ಬಿಜೆಪಿಯವರು ಸುಳ್ಳನ್ನು ವ್ಯವಸ್ಥಿತವಾಗಿ ಹೇಳ್ತಾರೆ. ಸಿಎಂ ಅವರ ಬಜೆಟ್ ಮಂಡನೆ ಸುಳ್ಳಿನ ಕಂತೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವ್ಯಂಗ್ಯವಾಡಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರಿಂದ ಬೊಮ್ಮಾಯಿ ಸುಳ್ಳು ಹೇಳೋದನ್ನು ಚೆನ್ನಾಗಿ ಕಲಿತಿದ್ದಾರೆ. ಸುಳ್ಳನ್ನೇ ವ್ಯವಸ್ಥಿತವಾಗಿ ಹೇಳಿದ್ದಾರೆ. ಇವರು ಭ್ರಷ್ಟಾಸುರ ಬೊಮ್ಮಾಯಿ ಎಂದರು.
ಕಳೆದ ಬಜೆಟ್ನಲ್ಲಿ ಕೊಟ್ಟ ಭರವಸೆ ಕಥೆ ಏನಾಯ್ತು.?. ಕಳೆದ ವರ್ಷದ 240 ಭರವಸೆಗಳು ಹಣಕಾಸು ಇಲಾಖೆಯ ಹಂತದಲ್ಲಿವೆ. 132 ಭರವಸೆಗಳನ್ನು ಸ್ಪರ್ಶಿಸಿಯೇ ಇಲ್ಲ ಎಂದು ಟೀಕಿಸಿದರು. ಕರ್ನಾಟಕದ ಜನರ ಕಲ್ಯಾಣವಾಗಿಲ್ಲ. ನಮ್ಮ ಕ್ಲಿನಿಕ್ ಎಲ್ಲಿ ಹೋದವು.? ಯುವತಿಯರಿಗೆ ಶುಚಿ ಸ್ಕೀಂ ಆರಂಭಿಸೋದನ್ನೇ ಮರೆತು ಹೋಗಿದ್ದಾರೆ. ಒಕ್ಕಲಿಗ ಅಭಿವೃದ್ಧಿ ನಿಗಮ ಸೇರಿ ಏನನ್ನೂ ಮಾಡಿಲ್ಲ. ನಾಗಮೋಹನ ದಾಸ್ ಸಮಿತಿ ವರದಿ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳವನ್ನು 9ನೇ ಶೆಡ್ಯೂಲ್‌ನಲ್ಲಿ ಸೇರಿಸಿಲ್ಲ. ಒಕ್ಕಲಿಗ, ಲಿಂಗಾಯತರಿಗೆ ವಿಶೇಷ ಮೀಸಲಾತಿ ನೀಡೋದಾಗಿ ಹೇಳಿದರು. ಆದರೆ ಸದ್ದಿಲ್ಲದೇ ಸ್ಟೇ ಬರುವಂತೆ ನೋಡಿಕೊಂಡರು. ಡಬಲ್ ಎಂಜಿನ್ ಸರ್ಕಾರವಿದ್ದರೂ ಪ್ರಯೋಜನವಿಲ್ಲ. ಇದೊಂದು ಬ್ಯಾಡ್, ಬ್ರೋಕನ್ ಸರ್ಕಾರ ಎಂದು ಹೇಳಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಚಾರವಾಗಿ ಸಚಿವ ಅಶ್ವತ್ಥ ನಾರಾಯಣ್ ಇತ್ತೀಚೆಗೆ ನೀಡಿದ ಹೇಳಿಕೆಯನ್ನು ರಣದೀಪ್ ಸಿಂಗ್ ಸುರ್ಜೇವಾಲಾ ಖಂಡಿಸಿದರು. ಬಿಜೆಪಿಯವರು ಮಹಾತ್ಮ ಗಾಂಧಿಯನ್ನೇ ಕೊಂದವರು. ಹಿಂಸೆ ಅನ್ನೋದು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರನ್ನೂ ಬಿಟ್ಟಿಲ್ಲ. ಬಿಜೆಪಿ ಅಶಾಂತಿ ಹಾಗೂ ಹಿಂಸೆಯನ್ನು ಮುಂದುವರಿಸುವ ಧೋರಣೆ ಹೊಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂಓದಿ: ಬೊಮ್ಮಾಯಿ ಜೋಳಿಗೆಯಲ್ಲಿ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ ಸಿಕ್ಕಿದ್ದೇನು..?