ಹುಬ್ಬಳ್ಳಿ: ಬಿಆರ್ಟಿಎಸ್ ಬಸ್ನಲ್ಲಿ ಮರೆತು ಹೋಗಿದ್ದ 3 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ಸಂಬಂಧಿಸಿದವರಿಗೆ ಮರಳಿಸುವ ಮೂಲಕ ಆರ್ಟಿಎಸ್ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಆನಂದ ಸೋಮಪ್ಪ ಕುಂಬಾರ ಮತ್ತು ಇವರ ಕುಟುಂಬ ಧಾರವಾಡದಿಂದ ಹುಬ್ಬಳ್ಳಿಗೆ ಬಿಆರ್ಟಿಎಸ್ ಬಸ್ನಲ್ಲಿ ಸಂಚರಿಸುವಾಗ ಆಕಸ್ಮಿಕವಾಗಿ ಬ್ಯಾಗನ್ನು ಬಿಟ್ಟು ಇಳಿದಿದ್ದರು.
ನಂತರ ಕುಂಬಾರ ಅವರು ಬೆಳಗ್ಗೆ 11 ಗಂಟೆಗೆ ಬಿಆರ್ಟಿಎಸ್ ಕಚೇರಿಗೆ ಆಗಮಿಸಿ ಬಸ್ನಲ್ಲಿ ಬ್ಯಾಗ್ ಮರೆತ್ತಿರುವುದಾಗಿ ದೂರನ್ನು ಸಲ್ಲಿಸಿದ್ದರು. ಆ ಪ್ರಕಾರ, ಕಂಟ್ರೋಲ್ ರೂಂನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಬ್ಯಾಗನ್ನು ಪತ್ತೆಹಚ್ಚಿ ನೋಡಿದಾಗ ಅದರಲ್ಲಿ ಬಂಗಾರದ ಆಭರಣಗಳಾದ ಒಂದು ಜೊತೆ ಕಿವಿ ಓಲೆ, ಮಾಂಗಲ್ಯಸೂತ್ರ, ನೆಕ್ಲೇಸ್, ನಾಲ್ಕು ಬಳೆಗಳು, ಒಂದು ವಾಚ್ ಸೇರಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಮಾಲೀಕರಿಗೆ ಒಪ್ಪಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಬಿಆರ್ಟಿಎಸ್ನ ಸಿಬ್ಬಂದಿ ಕಾರ್ಯ ವೈಖರಿಗೆ ಮರಳಿ ಬ್ಯಾಗ್ ಪಡೆದ ಕುಟುಂಬ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಾದ ಬಿ.ಡಿ ಜಾಧವ್, ವ್ಯವಸ್ಥಾಪಕರು(ಕಾರ್ಯಾಚರಣೆ) ಮತ್ತು ಮಂಜುನಾಥ ಜೆಡೇನವರ, ಸಾರ್ವಜನಿಕ ಸಂಪರ್ಕಾಧಿಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಓದಿ: ಶಾಂತಿ ಕದಡಲು ಯತ್ನಿಸಿದರೆ ಕ್ರಮ: ಪೊಲೀಸ್ ಪಥ ಸಂಚಲನ ಮಾಡಿ ಪೊಲೀಸ್ ಇಲಾಖೆ ಶಕ್ತಿ ಪ್ರದರ್ಶನ...!