ETV Bharat / state

ಸಿದ್ಧಾರೂಢ ಮಠದ ಟ್ರಸ್ಟಿಗಳಿಗೆ ಬ್ಲ್ಯಾಕ್‌ಮೇಲ್‌: ಮೂವರನ್ನು ಬಂಧಿಸಿದ ಪೊಲೀಸರು - ಹುಬ್ಬಳ್ಳಿ ನ್ಯೂಸ್

ಹುಬ್ಬಳ್ಳಿಯ ಸುಪ್ರಸಿದ್ಧ ಸಿದ್ಧಾರೂಢ ಮಠದ ಟ್ರಸ್ಟಿಗಳಿಗೆ ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪದ ಮೇಲೆ ಮೂವರನ್ನು ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಿದ್ಧಾರೂಢ ಮಠದ ಟ್ರಸ್ಟಿಗಳಿಗೆ ಬ್ಲ್ಯಾಕ್‌ಮೇಲ್‌: ಮೂವರನ್ನು ಬಂಧಿಸಿದ ಪೊಲೀಸರು
author img

By

Published : Oct 10, 2019, 5:01 AM IST

Updated : Oct 10, 2019, 11:00 AM IST

ಹುಬ್ಬಳ್ಳಿ: ಬ್ಲ್ಯಾಕ್‌ಮೇಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿಯ ಸುಪ್ರಸಿದ್ಧ ಸಿದ್ಧಾರೂಢ ಮಠದ ಟ್ರಸ್ಟಿಯೊಬ್ಬರು ಇನ್ನೊಬ್ಬ ಮಹಿಳಾ ಟ್ರಸ್ಟಿ ಮನೆಯಲ್ಲಿದ್ದಾಗ ಏಕಾಂತ ದೃಶ್ಯ ಸೆರೆ ಹಿಡಿದ ದುಷ್ಕರ್ಮಿಗಳು ಅವರನ್ನು ಬೆದರಿಸಿ ಹತ್ತು ಲಕ್ಷ ರೂಪಾಯಿ ಸುಲಿಗೆ ಮಾಡಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಇದರಿಂದ ಬೇಸತ್ತ ಟ್ರಸ್ಟಿ ಹಳೇ ಹುಬ್ಬಳ್ಳಿ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿ ಕಾರ್ಯಾಚರಣೆಗಿಳಿದ ಪೊಲೀಸರು ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿಗಳು ಮಠದ ಸೂಪರ್​ವೈಸರ್​ ಒಬ್ಬರ ಕುಮ್ಮಕ್ಕಿನ ಮೇರೆಗೆ ಈ ಕೃತ್ಯ ಮಾಡಿದ್ದಾರೆ ಎಂದು ಬಾಯ್ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Intro:ಹುಬ್ಬಳ್ಳಿ-03

ಹುಬ್ಬಳ್ಳಿಯ ಸುಪ್ರಸಿದ್ದ ಸಿದ್ಧಾರೂಢ ಮಠದ ಟ್ರಸ್ಟಿಗಳಿಗೆ ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಿದ್ಧಾರೂಢ ಮಠದ ಟ್ರಸ್ಟಿ ಡಾ. ಬಸನಗೌಡ ಸಂಕನಗೌಡರ್ ಎಂಬುವವರು
ಇನ್ನೊಬ್ಬ ಟ್ರಸ್ಟಿ ವಿಜಯಲಕ್ಷ್ಮಿ ಮನೆಯಲ್ಲಿದ್ದಾಗ
ಏಕಾಂತ ದೃಶ್ಯ ಸೆರೆಹಿಡಿದು ದುಷ್ಕರ್ಮಿಗಳು ಅವರನ್ನು ಬೆದರಿಸಿ ಹತ್ತು ಲಕ್ಷ ರೂಪಾಯಿ ಸುಲಿಗೆ ಮಾಡಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು.‌ ಇದರಿಂದ ಬೆಸತ್ತ ಟ್ರಸ್ಟಿ ಬಸನಗೌಡ ಅವರು ಹಳೇ ಹುಬ್ಬಳ್ಳಿ ಠಾಣೆಗೆ ದೂರು ನೀಡಿದ್ದರು. ಇವರ ಕಾರ್ಯಾಚರಣೆಗೆ ಇಳಿದ ಪೊಲೀಸರು ಸಂತೋಷ್ ಪೂಜಾರಿ, ಸಂಜು ಪಟದಾರಿ, ಗಣೇಶ್ ಕನ್ನೂರ್ ಎಂಬುವರನ್ನು ಬಂಧಿಸಿದ್ದು, ಮಠದ ಸುಪ್ರವೈಜರ್ ಸುನೀಲ್ ಕಮ್ಮಾರ್ ಚಿತಾವಣಿ ಮೇರೆಗೆ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.‌Body:H B GaddadConclusion:Etv hubli
Last Updated : Oct 10, 2019, 11:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.