ETV Bharat / state

‘ವಂಚಕರ’ ಬಲೆಗೆ ಬಿದ್ದ ಮಾಜಿ ಶಾಸಕರ ಪುತ್ರ.. ಸೈಬರ್​ ಠಾಣೆಯಲ್ಲಿ ಪ್ರಕರಣ ದಾಖಲು

ಮಾಜಿ‌ ಶಾಸಕ ಎನ್.ಎಚ್. ಕೋನರಡ್ಡಿ ಅವರ ಪುತ್ರ ನವೀನ್ ಅಪರಿಚಿತ ವ್ಯಕ್ತಿಯ ವಿಡಿಯೋ ಕಾಲ್‌ ವಂಚನೆಯ ಬಲೆಗೆ ಬಿದ್ದಿದ್ದಾರೆ. ಈ ಕುರಿತು ಮಾತನಾಡಿರುವ ಅವರು ಹಣಕ್ಕೆ ಬೇಡಿಕೆ ಇಟ್ಟು ಈಗಾಗಲೇ 13 ಸಾವಿರ ರೂಪಾಯಿ ಫೋನ್​ ಪೇ ಮಾಡಿಸಿಕೊಂಡಿದ್ದಾರೆ. ಮತ್ತೆ ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ ಪೊಲೀಸ್​ ಠಾಣೆ ಮೆಟ್ಟಿಲೇರಿರುವುದಾಗಿ ತಿಳಿಸಿದ್ದಾರೆ.

author img

By

Published : Mar 22, 2021, 4:59 PM IST

Updated : Mar 22, 2021, 5:22 PM IST

‘ವಂಚಕರ’ ಬಲೆಗೆ ಬಿದ್ದ ಮಾಜಿ ಶಾಸಕರ ಪುತ್ರ
‘ವಂಚಕರ’ ಬಲೆಗೆ ಬಿದ್ದ ಮಾಜಿ ಶಾಸಕರ ಪುತ್ರ

ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ಸದ್ಯ ಸಿಡಿ ಪ್ರಕರಣ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಮಾಜಿ ಶಾಸಕರ ಪುತ್ರನಿಗೆ ಬ್ಲ್ಯಾಕ್‌ಮೇಲ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.‌

ಮಾಜಿ‌ ಶಾಸಕ ಎನ್.ಎಚ್. ಕೋನರಡ್ಡಿ ಅವರ ಪುತ್ರ ನವೀನ್ ಅಪರಿಚಿತ ವ್ಯಕ್ತಿಯ ವಿಡಿಯೋ ಕಾಲ್‌ ವಂಚನೆಯ ಬಲೆಗೆ ಬಿದ್ದಿದ್ದಾರೆ. ಕೆಲ ದಿನಗಳ ಹಿಂದೆ ಅವರ ವಾಟ್ಸ್‌ಆ್ಯಪ್‌ಗೆ ವಿಡಿಯೋ ಕಾಲ್ ಮಾಡಿದ ವಂಚಕರು, ಅದನ್ನು ಸೇವ್ ಮಾಡಿಕೊಂಡು, ಅವರ ಮುಖಕ್ಕೆ ಬೇರೆ ವ್ಯಕ್ತಿಯ ನಗ್ನ ದೇಹದ ವಿಡಿಯೋ ಜೋಡಿಸಿದ್ದಾರೆ.

‘ವಂಚಕರ’ ಬಲೆಗೆ ಬಿದ್ದ ಮಾಜಿ ಶಾಸಕರ ಪುತ್ರ

ನಂತರ, ಹಣಕ್ಕೆ ಬೇಡಿಕೆಯಿಟ್ಟು ಬೆದರಿಸಿದ್ದಾರೆ. ಹಣ ಕೊಡದಿದ್ರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ಮಾಜಿ ಶಾಸಕರ ಪುತ್ರ ಫೋನ್ ಪೇ ಮೂಲಕ ಹಣವನ್ನು ಸಹ ನೀಡಿದ್ದಾರೆ. 13 ಸಾವಿರ ರೂಪಾಯಿ ಫೋನ್ ಪೇ ಮಾಡಿಸಿಕೊಂಡಿದ್ದಾರೆ. ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಸೈಬರ್ ಠಾಣೆಯಲ್ಲಿ‌ ನವೀನ್‌ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:'ಸುವರ್ಣ ಸೌಧಕ್ಕೆ ಸೆಕ್ರೆಟ್ರಿಯೆಟ್ ಕಚೇರಿಗಳನ್ನ ಸ್ಥಳಾಂತರಿಸಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ'

ಈ ಕುರಿತು ಮಾತನಾಡಿದ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಪುತ್ರ ನವೀನ್ ಕೋನರಡ್ಡಿಗೆ ಫೆಬ್ರವರಿ 18ರಂದು ವಾಟ್ಸ್​ಆ್ಯಪ್ ಕಾಲ್ ಬಂದಿತ್ತು. 13 ಸೆಕೆಂಡ್ ವಿಡಿಯೋ ಕಳಿಸಿದ್ರು. ಈ ಬಗ್ಗೆ ತಂದೆಗೆ ಹೇಳಿದ ಮೇಲೆ ದೂರನ್ನು ನೀಡಿದ್ದೆ. 3 ಬಾರಿ ಹಣ ಹಾಕಿದ್ದೇನೆ. ಸೈಬರ್ ಕ್ರೈಂ ಪೊಲೀಸರು ಅಕೌಂಟ್ ಫ್ರೀಜ್​ ಮಾಡಿದ್ರು. ಅವರ ಸ್ಕ್ರೀನ್ ಮೇಲೆ ಯಾರು ಅಂತಾ ಕಾಣಲಿಲ್ಲ. ನನ್ನ ಮುಖದ‌ ಮೇಲೆ ಬೆತ್ತಲೆ ಯುವತಿ ಇರುವ ಹಾಗೆ ಎಡಿಟ್ ಮಾಡಿದ್ದಾರೆ. ಠಾಣೆಗೆ ಹೋಗುವ ಮೊದಲು ಅಕೌಂಟ್​ಗೆ ಹಣ ಹಾಕಿದ್ದೆ. ವಿಡಿಯೋ ಶೇರ್ ಮಾಡದಿರಲು ಹಣ ಕೇಳುತ್ತಿದ್ದರು. 13,200 ರೂಪಾಯಿ ಹಣ ಹಾಕಿದ್ದೇನೆ. ವಂಚಕರು ರಾಜಸ್ಥಾನ ಮೂಲದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರಿಗೆ ಮಾಹಿತಿ ಹೋಗಿದೆ ಎಂದು ತಿಳಿದ ತಕ್ಷಣ ಮತ್ತೆ ಅವರು ಸಂಪರ್ಕಿಸಿಲ್ಲ. ನನ್ನ ಜೊತೆ ಅವರು ಎರಡು ಸೆಕೆಂಡ್ ಕೂಡಾ ಮಾತನಾಡಿಲ್ಲ ಎಂದು ನವೀನ್​ ಹೇಳಿದ್ದಾರೆ.

Last Updated : Mar 22, 2021, 5:22 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.