ಹುಬ್ಬಳ್ಳಿ: ಲಾಕ್ ಡೌನ್ ಕಾರಣದಿಂದ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದರೂ, ಬ್ಲ್ಯಾಂಗ್ ಫಂಗಸ್ ಪ್ರಕರಣಗಳು ದಿನೇ ದಿನೇ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಪ್ಪು ಫಂಗಸ್ನಿಂದ ಕೆಲವರು ಕಣ್ಣು ಕಳೆದುಕೊಂಡರೆ, ಇನ್ನೂ ಕೆಲವರ ಪ್ರಾಣಪಕ್ಷಿ ಹಾರಿಹೋಗಿದೆ.
ಪ್ರಸ್ತುತ 150 ಮಂದಿ ಬ್ಲ್ಯಾಕ್ ಫಂಗಸ್ ರೋಗಿಗಳು ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ 120ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಕಿಮ್ಸ್ನ ಇಎನ್ಟಿ ವಿಭಾಗದಿಂದ ಆಪರೇಷನ್ ಮಾಡಲಾಗಿದೆ. ಈ ಪೈಕಿ ಹತ್ತು ಜನರು ಸಂಪೂರ್ಣ ಕಣ್ಣು ಕಳೆದುಕೊಂಡು ಶಾಶ್ವತ ದೃಷ್ಠಿ ಹೀನರಾಗಿದ್ದಾರೆ. ಇದರೊಂದಿಗೆ ಬ್ಲ್ಯಾಕ್ ಫಂಗಸ್ ಸೋಂಕಿತರ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ.
ಓದಿ : ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲೇ ವ್ಯಾಕ್ಸಿನ್ ಕೊರತೆ.. ಅಧಿಕಾರಿಗಳ ವಿರುದ್ಧ ಜನಾಕ್ರೋಶ..
ಬ್ಲ್ಯಾಕ್ ಫಂಗಸ್ ಸೋಂಕಿತರು ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೆಲವರು ಕಣ್ಣು, ಕಿವಿ, ಮೆದುಳು ರೋಗದಿಂದ, ಇನ್ನೂ ಕೆಲವರು ಬಾಯಿ ದವಡೆ ಸಮಸ್ಯೆಯಿಂದ ನರಳುತ್ತಿದ್ದಾರೆ. ಇವರಿಗೆಲ್ಲ ಚಿಕಿತ್ಸೆ ಕೊಡಿಸುವುದು ವೈದ್ಯರು ಮತ್ತು ಜಿಲ್ಲಾಡಳಿತಕ್ಕೆ ಸವಾಲಾಗಿದೆ.