ಧಾರವಾಡ: ಕರ್ನಾಟಕದ ಬಿಜೆಪಿ ಶೇ 40ರಷ್ಟು ಸರ್ಕಾರ ಕರ್ನಾಟಕವನ್ನು ಲೂಟಿ ಮಾಡುತ್ತಿದೆ. ಈ ಸರ್ಕಾರಕ್ಕೆ ಯಾವಾಗ ಬುದ್ದಿ ಕಲಿಸ್ತೀರಿ ಎಂದು ಜನರನ್ನು ಪ್ರಿಯಾಂಕಾ ವಾದ್ರಾ ಪ್ರಶ್ನಿಸಿದರು.
ಜಿಲ್ಲೆ ನವಲಗುಂದ ಕ್ಷೇತ್ರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಟ್ರ್ಯಾಕ್ಟರ್ ಆತ್ಮಹತ್ಯೆ ಮಾಡಿಕೊಂಡರು. ಪತ್ರದ ಮೂಲಕ ಬಹಿರಂಗವಾಗಿ ಭ್ರಷ್ಟಾಚಾರವಾಗಿದೆ ಎಂದು ಮೋದಿಗೆ ಹೇಳಿದ್ರು, ಏನು ಪ್ರಯೋಜನವಾಗಿಲ್ಲ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಎಲ್ಲ ವಿಚಾರದಲ್ಲೂ ಜಿಎಸ್ಟಿ ಹಾಕಿ ದುಬಾರಿ ಮಾಡಿದ್ದಾರೆ. ಯಾವುದೇ ಕಾರ್ಯಗಳನ್ನು ಮಾಡದೆ ಕೇವಲ ಲೂಟಿ ಮಾಡಿದ್ದಾರೆ. ಮಹದಾಯಿ ವಿಚಾರದಲ್ಲಿ ಯಾವುದೇ ಕಾರ್ಯ ಆಗಿಲ್ಲ. ಕೇವಲ ಲೂಟಿ ಮಾಡೋದರಲ್ಲಿ ಮಾತ್ರ ಇವರ ವಿಚಾರ 1.5 ಲಕ್ಷ ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಇದೇ ಹಣದಲ್ಲಿ ದೊಡ್ಡ ಆಸ್ಪತ್ರೆ ಮಾಡಬಹುದಿತ್ತು. 2500 ಕಿ ಮೀ ರಸ್ತೆ ಅಭಿವೃದ್ಧಿ ಮಾಡಬಹುದಿತ್ತು. 1700 ಇಎಸೈ ಆಸ್ಪತ್ರೆ ಸೇರಿ 750 ಕಿ ಮೀ ಮೆಟ್ರೋ ಮಾಡಬಹುದಿತ್ತು. 30 ಲಕ್ಷ ಬಡವರಿಗೆ ಸ್ಮಾರ್ಟ್ ಆಸ್ಪತ್ರೆ ನಿರ್ಮಿಸಬಹುದಿತ್ತು. ನಂದಿನಿಯನ್ನ ಗುಜರಾತ್ ನ ಅಮುಲ್ ಜತೆ ಮರ್ಜ್ ಮಾಡುತ್ತಿದ್ದಾರೆ. ನಂದಿನಿ ಹಾಲು ಕಡಿಮೆ ಸಿಗುತ್ತಿದೆ ಅಂತ ನೆಪ ಹೇಳುತ್ತಿದ್ದಾರೆ ಎಂದು ಕಿಡಿ ಕಾರಿದರು.
ಮೀಸಲಾತಿ ಕೊಡ್ತೀವಿ ಅಂತ ಹೇಳಿ ಕೊಡಲಿಲ್ಲ. ಪ್ರತಿ ಸರ್ಕಾರಿ ನೌಕರಿಗಾಗಿ ಲಕ್ಷ ಲಕ್ಷ ಹಣ ಕೊಡಬೇಕು. ಉತ್ತಮ ಶಿಕ್ಷಣ ನೀಡಿದರೂ ಸಹ ಲಂಚ ಕೊಡಬೇಕು. ಸಿಲಿಂಡರ್ ಬೆಲೆ ಏರಿಕೆಯಾಗುತ್ತಾ ಹೊರಟಿದೆ. ನಮಗಾಗಿ ನೀವು ಮತ ಹಾಕಿ ಕರ್ನಾಟಕ ಭವಿಷ್ಯಕ್ಕಾಗಿ ಮತ ಹಾಕಿ ಎಂದು ಪ್ರಧಾನಿ ಅವರು ತಮ್ಮ ಅನುಕೂಲಕ್ಕೆ ಮತ ಕೇಳ್ತಾರೆ ಎಂದು ಆರೋಪಿಸಿದರು.
ಇದಕ್ಕೂ ಮೊದಲು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ರೈತರ ಸಾಲಮನ್ನಾ ಮಾಡಿದ್ದೇವೆ. ಕೃಷಿ ಭಾಗ್ಯ, ಆರೋಗ್ಯ ಭಾಗ್ಯ, ವಿದ್ಯಾಶ್ರೀ, ಇಂದಿರಾ ಕ್ಯಾಂಟೀನ್ ನಂತಹ ಹಲವು ಯೋಜನೆ ಜಾರಿಗೆ ತಂದಿದ್ದೇವೆ. ಹಿಂದೆ ನೀಡಿದ್ದೆಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರವನ್ನು ಪ್ರಶಂಸಿಸಿದರು.
ಕಾಂಗ್ರೆಸ್ ಸರ್ಕಾರ ಬಂದ್ರೆ 3000 ಸಾವಿರ ನಿರೋದ್ಯೋಗ ಭತ್ಯೆ ನೀಡುತ್ತೇವೆ. ಕೆಲಸ ಸಿಗೋವರೆಗೂ ಭತ್ಯೆ ನೀಡುತ್ತೇವೆ ಅನ್ನ ಭಾಗ್ಯಯೋಜನೆಯಡಿ 10 ಕೆ ಜಿ ಅಕ್ಕಿ, ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಮನೆಯ ಮಹಿಳೆಯರು ಇಂದಿನ ದಿನಗಳಲ್ಲಿ ಮನೆಗಳನ್ನು ನಡೆಸುವುದು ಕಷ್ಟವಿದೆ. ಪ್ರತಿ ಕುಟುಂಬದ ಯಜಮಾನಿಗೆ ಗೃಹ ಲಕ್ಷ್ಮಿ ಯೋಜನೆಯಡಿ 2 ಸಾವಿರ ಕೊಡ್ತೀವಿ. ಕರ್ನಾಟಕದ ಸರ್ಕಾರ ನೋಡಿದ್ರೆ ದುಃಖ ಆಗುತ್ತೆ, ಸ್ವಲ್ಪ ಆದ್ರೂ ನಿಮ್ಮ ಪರವಾಗಿ ಅವರು ಕೆಲ್ಸ ಮಾಡಬೇಕಿತ್ತು. ಆದರೆ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಅಭಿವೃದ್ಧಿ ಮರೆತಿದೆ ಎಂದು ಆರೋಪಿಸಿದರು.
ಲಿಂಗಾಯತ ಸಮುದಾಯದ ಮುಖಂಡ ಜಗದೀಶ್ ಶೆಟ್ಟರ್ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳದ ಬಿಜೆಪಿ,ಟಿಕೆಟ್ ಕೊಡದೇ ಅಪಮಾನ ಮಾಡಿದೆ. ಲಿಂಗಾಯತ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ. ಅವರ ವಿರುದ್ಧ ಭ್ರಷ್ಟಾಚಾರದ ನಿಪುಣರನ್ನು ಹುಡುಕಿ ಟಿಕೆಟ್ ನೀಡಿದೆ. ಭ್ರಷ್ಟಾಚಾರ ಮಾಡಿದವರ ಜತೆ ಪ್ರಧಾನಿ ವಿಡಿಯೋ ಕಾಲ್ ಮಾಡ್ತಾರೆ ಎಂದು ಆಪಾದನೆ ಮಾಡಿದರು.
ಇದನ್ನೂ ಓದಿ:ಚುನಾವಣಾ ಅಕ್ರಮದ ಅಬ್ಬರ: 300 ಕೋಟಿ ರೂ. ಗಡಿ ದಾಟಿದ ಒಟ್ಟು ಜಪ್ತಿ ಮೊತ್ತ