ETV Bharat / state

ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ 150 ಸ್ಥಾನದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ.. ಅರುಣ್​ ಸಿಂಗ್​ - State BJP in charge Arun Singh

ಕರ್ನಾಟಕದಲ್ಲಿ 2013ರ ಇತಿಹಾಸ ನಿರ್ಮಾಣವಾಗುತ್ತೆ ಎನ್ನುವುದು ಆಧಾರರಹಿತ, ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಸೋಲಿನ ಅಲೆ ಆರಂಭವಾಗಿದೆ. ಬಿಜೆಪಿ ಗೆಲುವಿನ ಅಲೆ ಎದ್ದಿದೆ ಎಂದು ಅರುಣ್​ ಸಿಂಗ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

State BJP in-charge Arun Singh
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್
author img

By

Published : Oct 16, 2022, 5:29 PM IST

ಹುಬ್ಬಳ್ಳಿ: 2023ರ ವಿಧಾನಸಭೆ ಚುನಾವಣೆಗೆ ಅಭೂತಪೂರ್ವ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಪರ ಮತ ಚಲಾಯಿಸಲು ಕರ್ನಾಟಕದ ಜನ ಸಿದ್ಧರಾಗಿದ್ದಾರೆ. ರಾಹುಲ್ ಗಾಂಧಿಗೆ ಯಾವುದೇ ದೂರದೃಷ್ಟಿ ಇಲ್ಲ. ಅವರನ್ನು ಯಾರು ನಾಯಕ ಅಂತಾ ಒಪ್ಪಿಕೊಳ್ಳುವುದಿಲ್ಲಾ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಪರ್ವ ನಡೆದಿದೆ. ಹೀಗಾಗಿ ಈಗಾಗಲೇ ದೇಶದ ಜನ ನರೇಂದ್ರ ಮೋದಿಜಿ ಪರ ಫಲಿತಾಂಶ ನೀಡಿದ್ದಾರೆ. ಹಲವು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಅದೇ ರೀತಿ ಕರ್ನಾಟಕದಲ್ಲಿ ಸಹ ಬಿಜೆಪಿ 150ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಜಯ ಸಾಧಿಸಿ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂಬ ವಿಶ್ವಾಸವನ್ನು ಅರುಣ್​ ಸಿಂಗ್ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ 2013ರ ಇತಿಹಾಸ ನಿರ್ಮಾಣವಾಗುತ್ತೆ ಎನ್ನುವುದು ಆಧಾರರಹಿತ, ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಸೋಲಿನ ಅಲೆ ಆರಂಭವಾಗಿದೆ. ಬಿಜೆಪಿ ಗೆಲುವಿನ ಅಲೆ ಎದ್ದಿದೆ. ರಾಹುಲ್ ಗಾಂಧಿ ದೇಶದಲ್ಲಿ ಮಾಡುತ್ತಿರುವ ಭಾರತ ಜೋಡೋ ಯಾತ್ರೆಯಲ್ಲಿ ಯಾವುದೇ ವಿಶೇಷ ವಿಷಯಗಳಿಲ್ಲದ ಕಾರಣ ಸುಮ್ಮನೆ ಬಿಜೆಪಿ ವಿರುದ್ಧ ಹಾರಿಕೆ ಟೀಕೆಗಳನ್ನು ಮಾಡುತ್ತಾ ಓಡಾಡುತ್ತಿದ್ದಾರೆ. ಇದು ಭಾರತ ಜೋಡೋ ಯಾತ್ರೆ ಅಲ್ಲ. ಡಿಕೆಶಿ ಮತ್ತು ಸಿದ್ದರಾಮಯ್ಯ ಜೋಡಿಸುವ ಜೋಡೋ ಯಾತ್ರೆ ಹಾಗಾಗಿ ಭಾರತ ಜೋಡೋ ಯಾತ್ರೆ ವಿಫಲವಾಗಿದೆ ಎಂದರು.

ರ್ನಾಟಕದಲ್ಲಿ 150 ಸ್ಥಾನದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ.. ಅರುಣ್​ ಸಿಂಗ್​

ಬಸನಗೌಡ ಪಾಟೀಲ್ ಯತ್ನಾಳ ಪಕ್ಷದ ನಾಯಕ ಅಲ್ಲ, ರಾಜ್ಯ ಬಿಜೆಪಿ ಕೋರ್ ಕಮಿಟಿ ಸದಸ್ಯರು ಅಲ್ಲ. ಅವರ ಸ್ವಭಾವವೇ ಹಾಗೇ. ಅವರ ಹೇಳಿಕೆಗಳಿಗೆ ಹೆಚ್ಚು ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದು ಯತ್ನಾಳ ವಿರುದ್ಧ ಅರುಣ್ ಸಿಂಗ್ ಕಿಡಿಕಾರಿದರು.

ಶಾಸಕ ಅರವಿಂದ ಬೆಲ್ಲದ್ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ತೆಗೆದು ಹಾಕಬೇಕೆಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಾಮೂಹಿಕ ನಾಯಕದಲ್ಲಿ ಚರ್ಚೆ ನಡೆಯುತ್ತದೆ. ಹಾಗಾಗಿ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿಕೊಂಡಿದ್ದಾರಷ್ಟೇ. ಇಂತಹ ಮಹತ್ವದ ವಿಚಾರಗಳಲ್ಲಿ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ತಿರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ನಮ್ಮದು ಸಬ್ ಕಾ ಸಾಥ್, ಸಬ್ ಕಾ ವಿಕಾಸ ಸರ್ಕಾರ ಹಾಗಾಗಿ ಎಲ್ಲರ ಅಭಿವೃದ್ಧಿ ನಮ್ಮ ಧ್ಯೇಯವಾಗಿದೆ. ಜಗದೀಶ್ ಶೆಟ್ಟರ್ ಅವರು ನಮ್ಮ ಪಕ್ಕವೇ ಇದ್ದಾರೆ. ಅವರನ್ನು ಸೈಡ್ ಲೈನ್ ಮಾಡುವ ಪ್ರಶ್ನೆ ಇಲ್ಲ. ನಮ್ಮ ಕೋರ್ ಕಮಿಟಿಯ ಸದಸ್ಯರು ಜಗದೀಶ್ ಶೆಟ್ಟರ್ ಅವರು ಆಗಿದ್ದಾರೆ. ಹು-ಧಾ ದೇಶದಲ್ಲಿ ಪ್ರಸಿದ್ದ ಸ್ಥಳ, ಇಲ್ಲಿನ ಜನರು ಪ್ರಸಿದ್ದರಾದವರು. ನಾವು ಸರಿಯಾದ ಸಮಯಕ್ಕೆ ಸರಿಯಾದ ತೀರ್ಮಾನ ಕೈಗೊಳ್ಳುತ್ತೇವೆ. ಬಿಜೆಪಿ ಇತರ ಪಕ್ಷಗಳ ಹಾಗಲ್ಲ‌, ಹಾಗಾಗಿ ಜನರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು ಎಂದರು.

40 % ಕಮಿಷನ್ ಸರ್ಕಾರ ಎಂಬುದಕ್ಕೆ ಯಾವುದೇ ದಾಖಲೆಯಿಲ್ಲ. ದಾಖಲೆಯಿಂದಲೇ ಲೋಕಾಯುಕ್ತಕ್ಕೆ ದೂರು ಕೊಡಲಿ. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಜನಪರ ಕಾರ್ಯಗಳನ್ನು ಮಾಡುತ್ತಿದೆ. ಈ ಹಿಂದೆ ಪಿಎಸ್​ಐ, ಪಿಎಫ್ಐ ಅವರಿಂದ ಹಿಂದೂಗಳ ಹತ್ಯೆ ಇವೆಲ್ಲವೂ ಕಾಂಗ್ರೆಸ್ ಸಮಯದಲ್ಲಿ ಆಗಿರೋದು ಅದರ ಬಗ್ಗೆ ಕಾಂಗ್ರೆಸ್​ನವರು ಮಾತನಾಡಲಿ ಎಂದರು.

ಇದನ್ನೂ ಓದಿ: ನಾನು ಪಕ್ಷ ಸಂಘಟನೆಗಾಗಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ.. ಮಲ್ಲಿಕಾರ್ಜುನ ಖರ್ಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.