ಹುಬ್ಬಳ್ಳಿ: ಬೈಕ್ನ್ನು ವೇಗವಾಗಿ ಓಡಿಸುವುದು, ಬೈಕ್ನಲ್ಲಿ ಸ್ಟಂಟ್ ಮಾಡುವುದು, ಬೈಕ್ ವ್ಹೀಲಿಂಗ್ ಮಾಡುವುದು ಇಂದು ಯುವಕರ ಫ್ಯಾಷನ್ ಆಗಿದ್ದು, ಹುಬ್ಬಳ್ಳಿಯಲ್ಲಿ ಯುವಕನೊಬ್ಬ ನಡು ರಸ್ತೆಯಲ್ಲಿಯೇ ಬೈಕ್ ವ್ಹೀಲಿಂಗ್ ಮಾಡಿದ ವಿಡಿಯೋ ವೈರಲ್ ಆಗಿದೆ.
ನಗರದ ಕೇಶ್ವಾಪುರದ ಫಾತಿಮಾ ಕಾಲೇಜು ಹತ್ತಿರದ ರಸ್ತೆಯಲ್ಲಿ ಯುವಕನೊಬ್ಬ ಬೈಕ್ ವ್ಹೀಲಿಂಗ್ ಮಾಡಿದ್ದು, ಇದರಿಂದಾಗಿ ಇತರೆ ವಾಹನ ಸವಾರರಿಗೆ ಆತಂಕ ಪಡುವಂತಾಗಿದೆ. ಇದೇ ರಸ್ತೆಯ ಪಕ್ಕದಲ್ಲಿ ಕಾಲೇಜುಗಳಿದ್ದು, ಹುಡುಗಿಯರನ್ನು ಮೆಚ್ಚಿಸಲು ಪುಂಡ ಯುವಕರು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆಪಾದಿಸಿದ್ದಾರೆ.
ಸಾರ್ವಜನಿಕ ಪ್ರದೇಶ, ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೈಕ್ ಸ್ಟಂಟ್ ಮಾಡುವುದು ಅಪರಾಧವಾಗಿದ್ದು, ಈ ಬಗ್ಗೆ ಕೆಲವರಿಗೆ ಭಯವೇ ಇಲ್ಲದಂತಾಗಿದೆ. ಕೂಡಲೇ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಬೈಕ್ ವ್ಹೀಲಿಂಗ್ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿವೆ.