ಹುಬ್ಬಳ್ಳಿ: ಕೊರೊನಾ ಹರಡದಂತೆ ತಡೆಯಲು ಲಾಕ್ಡೌನ್ ಆದೇಶವಿದ್ದರೂ ಬೈಕ್ನಲ್ಲಿ ಸುತ್ತಾಡಿದ್ದಕ್ಕೆ ಪೊಲೀಸರು ಬೈಕ್ ಸೀಜ್ ಮಾಡಿದ್ದಾರೆ.
ಜಿಲ್ಲಾಡಳಿತ ಆದೇಶ ಧಿಕ್ಕರಿಸಿ ನಗರದಲ್ಲಿ ಹಲವರು ಸಂಚರಿಸುತ್ತಿದ್ದರು. ಕೇಶ್ವಾಪುರ ಸರ್ಕಲ್ ಹತ್ತಿರ ಪೊಲೀಸರು ಬೈಕ್ ಸೀಜ್ ಮಾಡಿ ಪೋಲಿ ಸುತ್ತುತಿದ್ದ ಕೆಲವರಿಗೆ ಬುದ್ಧಿ ಕಲಿಸಿದ್ದಾರೆ.
ಈ ಕ್ರಮವನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ. ಆದರೆ ಜಿಲ್ಲಾಡಳಿತ ಕ್ರಮ ಕೈಗೊಂಡರೂ ಕೆಲವರು ಹೊರಗೆ ತಿರುಗುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.