ಧಾರವಾಡ: ಭಿಕ್ಷುಕಿಯನ್ನು ಬೀದಿ ನಾಯಿಗಳು ಎಳೆದಾಡಿ ಕೊಂದು ಹಾಕಿರುವ ಘಟನೆ ಉಪ್ಪಿನಬೆಟಗೇರಿ ಗ್ರಾಮದ ಖಬರಸ್ತಾನ್ ಬಳಿ ನಿನ್ನೆ(ಸೋಮವಾರ) ರಾತ್ರಿ ಘಟನೆ ನಡೆದಿದೆ. ಖಬರಸ್ತಾನ್ ಬಳಿ ಮಲಗಿದ್ದಾಗ ನಾಯಿಗಳ ಗುಂಪು ಭಿಕ್ಷುಕಿಯ ಮೇಲೆರಗಿ ದಾಳಿ ಮಾಡಿವೆ. ತೊಡೆ, ಕೈಗಳಿಗೆ ಗಾಯವಾಗಿದ್ದು ಸ್ಥಳದಲ್ಲೇ ಅವರು ಅಸುನೀಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಗರಗ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಗರದಲ್ಲಿ ಬೀದಿ ನಾಯಿಗಳ ದಾಳಿಗೆ ತತ್ತರಿಸಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಈ ಸಂದರ್ಭದಲ್ಲಿ ಜನರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬೀದಿ ನಾಯಿ ಹಾವಳಿಗೆ ವಾಣಿಜ್ಯ ನಗರಿ ಹುಬ್ಬಳ್ಳಿ ಜನ ತತ್ತರ