ETV Bharat / state

ಇಂತಹ ಪೊಲೀಸ್ ಕಮಿಷನರ್, ಡಿಸಿಪಿ ನಾನು ನೋಡಿಲ್ಲ: ಹೊರಟ್ಟಿ ಬೇಸರ - hubli police department issue

ಹುಬ್ಬಳ್ಳಿ-ಧಾರವಾಡ ಪೊಲೀಸ್​ ಕಮಿಷನರ್​ ನಡುವಿನ ವಿವಾದ ಕುರಿತು ಪ್ರತಿಕ್ರಿಯಿಸಿರುವ ಎಂಎಲ್​​ಸಿ ಬಸವರಾಜ ಹೊರಟ್ಟಿ, ಇದು ಅತ್ಯಂತ ಬೇಸರದ ಸಂಗತಿ. ಈ ರೀತಿ ಅಧಿಕಾರಿಗಳ ಜಗಳ ನಾನು ಕೇಳಿಯೇ ಇಲ್ಲ ಎಂದಿದ್ದಾರೆ.

HorattiBasavraj horatti reaction about hubli-Dharwad commissioner issue
ಬಸವರಾಜ ಹೊರಟ್ಟಿ ಕಳವಳ
author img

By

Published : Oct 10, 2020, 4:34 PM IST

ಹುಬ್ಬಳ್ಳಿ: ನನ್ನ 40 ವರ್ಷದ ರಾಜಕೀಯದಲ್ಲಿ ಇಂತಹ ಪೊಲೀಸ್ ಕಮಿಷನರ್ ಮತ್ತು ಡಿಸಿಪಿಯನ್ನು ನೋಡಿಲ್ಲವೆಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಬಸವರಾಜ ಹೊರಟ್ಟಿ ಹೇಳಿಕೆ
ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಹುಬ್ಬಳ್ಳಿ - ಧಾರವಾಡ ಪೊಲೀಸ್ ಇಲಾಖೆ ಒಳ ಜಗಳದಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ. ಪೊಲೀಸ್ ಕಾನ್ಸ್​​ಟೇಬಲ್​​ಗಳು ಜಗಳ ಮಾಡುವುದನ್ನು ನಾವು ನೋಡಿದ್ವಿ. ಆದ್ರೆ ಪೊಲೀಸ್​ ಆಫೀಸರ್ಸ್ ಜಗಳ ಇದೇ ಮೊದಲ ಬಾರಿಗೆ ಕೇಳಿದ್ದೇವೆ ಎಂದರು.

ಇನ್ನು ಇದೇ ಜಿಲ್ಲೆಯಲ್ಲೇ ಮಾಜಿ ಸಿಎಂ, ಹಾಲಿ ಮಂತ್ರಿ, ಗೃಹ ಮಂತ್ರಿ ಇದ್ರೂ ಇದೆಲ್ಲಾ ನಡೆಯುತ್ತಿರುವುದು ಬೇಸರದ ಸಂಗತಿ ಎಂದು ಪೊಲೀಸ್​ ಇಲಾಖೆಯ ಗೊಂದಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.