ETV Bharat / state

ಕೋವಿಡ್ ನಿಯಮ ಉಲ್ಲಂಘಿಸಿ ಬಸವೇಶ್ವರ ಜಾತ್ರೆ: ಕುಂದಗೋಳದಲ್ಲಿ 18 ಜನರ ವಿರುದ್ಧ ಪ್ರಕರಣ

ಕೊರೊನಾ ನಿಯಮ ಉಲ್ಲಂಘಿಸಿ ಜಾತ್ರೆ ಆಚರಿಸಿದ ಆರೋಪದ ಮೇಲೆ 18 ಜನರ ಮೇಲೆ ಪ್ರಕರಣ ದಾಖಲಾಗಿದೆ.

dasd
ಕುಂದಗೋಳದಲ್ಲಿ 18 ಜನರ ವಿರುದ್ಧ ಪ್ರಕರಣ
author img

By

Published : Apr 17, 2021, 10:59 PM IST

ಧಾರವಾಡ: ಕೊರೊನಾ ನಿಯಮ ಉಲ್ಲಂಘಿಸಿ ಕುಂದಗೋಳ ತಾಲೂಕಿನ ಕೂಬಿಹಾಳ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಆಚರಿಸಿದ ಆರೋಪದ ಮೇಲೆ 18 ಜನರ ಮೇಲೆ ಕುಂದಗೋಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮಪ್ಪ ಸಂಶಿ, ಸಿದ್ದಪ್ಪ ರಡ್ಡೇರ, ಹನಮಂತಪ್ಪ ವಡಕಣ್ಣವರ, ಮಂಜುನಾಥ ಪೂಜಾರ, ಯಲ್ಲಪ್ಪ ಹೆಬಸೂರ, ಚಂದ್ರಶೇಖರ ಪಾಲಕರ್, ಬಸಪ್ಪ ಹೊರಗಿನಮನಿ, ಬಸವರಾಜ ದೇಶಪಾಂಡೆ, ಯಲ್ಲಪ್ಪ ಬಿಳೆಬಲ್, ನಿಂಗಪ್ಪ ಬಾಚಣಕಿ, ಬಾಬುಖಾನ್ ನೂರಾಲಿಖಾನವರ, ಚೆನ್ನಬಸಪ್ಪ ರಡ್ಡೇರ, ಸುರೇಶಗೌಡ ಪಾಟೀಲ, ವೀರಪಾಕ್ಷಯ್ಯ ಕುಮಾರಗೊಪ್ಪ, ಬಸನಗೌಡ ಶಿರಕೋಳ, ಶಿವಪ್ಪ ತಳವಾರ, ಜಗದೀಶ ಬಾಗಲ, ಬಸಪ್ಪ ಕುಂಬಾರ ಮೇಲೆ ಪ್ರಕರಣ ದಾಖಲಾಗಿದೆ.

ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಏ. 3ರಿಂದ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಚರಿಸಬಾರದು ಎಂದು ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದರು. ಏ. 13ರಂದು ಈ ನಿಯಮ ಉಲ್ಲಂಘಿಸಿ, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಪಾಲಿಸದೆ ಬಸವೇಶ್ವರ ಜಾತ್ರೆ ಆಚರಿಸಲಾಗಿದೆ ಎಂದು ಕೂಬಿಹಾಳ ಗ್ರಾಮ ಪಂಚಾಯತ್​ ಅಭಿವೃದ್ಧಿ ಅಧಿಕಾರಿ ಬಸವರಾಜ ಬಾಗಲ ದೂರು ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.