ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಲಾಕ್ಡೌನ್ ಆಗಿರುವುದರಿಂದ ರಾಜ್ಯದ ಶಿಕ್ಷಕರಿಗೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ದಯವಿಟ್ಟು ಮನೆಯಿಂದ ಹೊರ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ ಅವರು ಶಿಕ್ಷಕರು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು, ನೀವು ಸರಕಾರದ ಆದೇಶ ಪಾಲಿಸಿ. ವಿದ್ಯಾರ್ಥಿಗಳಿಗೂ ಈ ಬಗ್ಗೆ ತಿಳಿ ಹೇಳಿ, ವಿದ್ಯಾರ್ಥಿಗಳ ಪೋಷಕರಿಗೂ ಮನವಿ ಮಾಡಿಕೊಳ್ಳಿ. ಆ ಮೂಲಕ ಕೊರೊನಾ ಹಿಮ್ಮೆಟ್ಟಿಸೋ ಕೆಲಸ ಮಾಡಿ ಎಂದು ಶಿಕ್ಷಕರಿಗೆ ಮನವಿ ಮಾಡಿಕೊಂಡಿದ್ದಾರೆ.
![horatti](https://etvbharatimages.akamaized.net/etvbharat/prod-images/kn-hbl-04-horatti-letter-av-7208089_26032020120405_2603f_1585204445_101.jpg)
ಅನೇಕ ದೇಶಗಳು ಕೊರೊನಾ ಮುಂದೆ ಕೈ ಚೆಲ್ಲಿ ಕೂತಿವೆ, ನಾವು ಹಾಗಾಗದಂತೆ ಮಾಡಬೇಕಿದೆ. ಅದರಲ್ಲಿ ನಿಮ್ಮ ಪಾತ್ರ ಬಲು ಮುಖ್ಯ.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಎಂದು ನಾಡಿನ ಶಿಕ್ಷಕ ವೃಂದಕ್ಕೆ ಮಾಧ್ಯಮ ಪ್ರಕಟಣೆ ಮೂಲಕ ಬಸವರಾಜ ಹೊರಟ್ಟಿ ಮನವಿ ಮಾಡಿದ್ದಾರೆ.