ಹುಬ್ಬಳ್ಳಿ: ಎಂಇಎಸ್ವೊಂದು ಕಿಡಿಗೇಡಿಗಳ ಸಂಘಟನೆ, ಅದನ್ನು ನಾವು ಹ್ಯಾಂಡಲ್ ಮಾಡುತ್ತೇವೆ. ಚುನಾವಣೆ ವೇಳೆ ಎಂಇಎಸ್‌ನವರು ಜನರ ಮನಸ್ಸನ್ನು ಕೆಡಿಸುವ ಗಿಮಿಕ್ ಮಾಡುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆಸಮಾಧಾನ ವ್ಯಕ್ತಪಡಿಸಿದರು. ಬೆಳಗಾವಿ ಜನರಿಗೆ ಇದೆಲ್ಲ ಗೊತ್ತಿದೆ, ಜನರೇ ಇವರಿಗೆಲ್ಲ ಉತ್ತರ ಕೊಡುತ್ತಾರೆ. ಜನ ತೀರ್ಮಾನ ತೆಗೆದುಕೊಂಡು ಎಂಇಎಸ್‌ಅನ್ನು ಐದು ವರ್ಷ ಮನೆಗೆ ಕಳಿಸ್ತಾರೆಂದು ಸಿಎಂ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಎಂಇಎಸ್ ಕುರಿತು ಕಪ್ಪುಬಾವುಟ ಪ್ರದರ್ಶನ ಅಲ್ಲ. ಅವರ ಚಟುವಟಿಕೆಗಳೆಲ್ಲ ಕಪ್ಪು ಇರುವಂಥದ್ದು. ಅವರ ಉದ್ದೇಶ ಜನರ ಭಾವನೆಗಳ ವಿರುದ್ಧ ಎನ್ನವಂಥದ್ದು ಬಹಳ ಸ್ಪಷ್ಟವಾಗಿದೆ. ಅವರ ಕೃತ್ಯಗಳೆಲ್ಲವೂ ಕೂಡ ಕಪ್ಪೇ ಇದೆ. ಇದು ಅತ್ಯಂತ ಖಂಡನೀಯ. ಚುನಾವಣೆ ಸಂದರ್ಭದಲ್ಲಿ ಲಾಭಗಳಿಸಲು ಈ ತರ ಮಾಡುತ್ತಿದ್ದಾರೆ. ಆದರೆ ಜನ ಅವರ ಜೊತೆ ಇಲ್ಲ. ಕಳೆದ 25 ವರ್ಷದಿಂದ ಅವರು ಚುನಾವಣಾ ಕಣದಿಂದ ಸೋತಿದ್ದಾರೆ. ಈ ಬಾರಿನೂ ಸೋಲುತ್ತಾರೆ. ಜನರ ಮನಸ್ಸನ್ನು ಕೆಡಿಸುವಂಥ ಗಿಮಿಕ್. ಇದರ ಬಗ್ಗೆ ಬೆಳಗಾವಿ ಜನರಿಗೆಲ್ಲ ತಿಳಿದಿದೆ, ಇದಕ್ಕೆ ಶಾಶ್ವತ ಪರಿಹಾರ ಇಲ್ಲ. ಇದಕ್ಕೆ ಜನ ತೀರ್ಮಾನ ಕೊಟ್ಟಾಗ ತಣ್ಣಗಿರುತ್ತಾರೆ. 5 ವರ್ಷ ಕಳೆದ ನಂತರ ಶುರು ಮಾಡುತ್ತಾರೆ. ಇದು ಕಿಡಿಗೇಡಿಗಳ ಕೆಲಸ. ಎಂಇಎಸ್ ಕಿಡಿಗೇಡಿಗಳ ಸಂಘಟನೆ ಎಂದು ಆರೋಪಿಸಿದರು.
ಇದನ್ನೂ ಓದಿ: ಬಿಜೆಪಿ 1,50,000 ಕೋಟಿ ರೂ. ಲೂಟಿ ಮಾಡಿದೆ: ಭ್ರಷ್ಟಾಚಾರ ಕಾರ್ಡ್ ಬಿಡುಗಡೆ ಮಾಡಿದ ಪವನ್ ಖೇರಾ
ಮುಂದೆ ಮೋದಿಯವರನ್ನು ದೇಶದ ಪ್ರಧಾನಿಯೋ ಅಥವಾ ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿಯೋ. ಅವರು ಆ ತರಹ ಮಾಡುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ನಮ್ಮ ಪ್ರಧಾನಿ ಕಾಂಗ್ರೆಸ್‌ನ ಹಿಂದಿನ ಪ್ರಧಾನಮಂತ್ರಿಗಳ ತರಹವೇ ಇರಬೇಕೆಂದೇನೂ ಇಲ್ಲ. ಸ್ಟ್ರೇಟ್ ಜಾಕೆಟ್, ಜನರ ಬಳಿ ಹೋಗಬಾರದು, ಜನರ ಭಾವನೆ ತಿಳಿದುಕೊಳ್ಳಬಾರದು, ದಿಲ್ಲಿಯಲ್ಲಿ ಇರಬೇಕು. ಹಳ್ಳಿಗೆ ಹೋದರೆ ಅವರು ಪ್ರಧಾನಿ ಅಲ್ಲ ಅನ್ನೋದು ಹಳೆಯ ಕಾಂಗ್ರೆಸ್‌ನ ವಿಚಾರಧಾರೆ, ಸಿದ್ದರಾಮಯ್ಯ ಅದೇ ವಿಚಾರಧಾರೆಗೆ ಹೊಂದಿಕೊಂಡಿದ್ದಾರೆ. ಅದರಿಂದ ಹೊರಗೆ ಬರಲು ಅವರಿಗೂ ಸಾಧ್ಯವಿಲ್ಲ ಎಂದು ಟಕ್ಕರ್ ಕೊಟ್ಟರು.
ವಿಭಿನ್ನವಾಗಿರುವ ಪ್ರಧಾನಿಗಳು ಇದ್ದಾಗ ಅವರಿಗೆ ಕಷ್ಟವಾಗುತ್ತೆ. ರಾಜ್ಯದ ಜನರು ಕಷ್ಟದಲ್ಲಿದ್ದಾಗ ನಮ್ಮ ಪ್ರಧಾನಿ ಅತಿ ಹೆಚ್ಚು ಪರಿಹಾರ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅತೀ ಹೆಚ್ಚು ಆತ್ಮಹತ್ಯೆಗಳಾಗಿದ್ದವು. ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಆಗ ರಾಜ್ಯಕ್ಕೆ ಬಂದಿದ್ರಾ? ಸುಮ್ನೆ ಮಾತಾಡ್ತಾರೆ. ಎಲ್ಲಿಯವರೆಗೆ ಕಾಂಗ್ರೆಸ್‌ನವರು ಪಿಎಫ್‌ಐ, ಎಸ್‌ಡಿಪಿಐ ಅನ್ನು ಸಂತೋಷಪಡಿಸುವ ಪ್ರಯತ್ನದಲ್ಲಿ ಇರುತ್ತಾರೆ. ಅಲ್ಲಿಯವರೆಗೆ ಬಜರಂಗದಳದ ವಿಚಾರ ಜನರ ಮಧ್ಯೆ ಇರುತ್ತೆ. ಕಾಂಗ್ರೆಸ್ ಪ್ರಣಾಳಿಕೆ ನೋಡಿ ಬಿಜೆಪಿ ಹೆದರಿದೆ ಅನ್ನೋದು ಹಾಸ್ಯಾಸ್ಪದ ಎಂದು ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಇದನ್ನೂ ಓದಿ: ಸೋಮಣ್ಣ, ಪ್ರತಾಪ್ ಸಿಂಹ ನನ್ನ ಆಪ್ತರು: ಶಿವರಾಜ್ ಕುಮಾರ್