ETV Bharat / state

ಮಠಾಧೀಶರ ಬಗ್ಗೆ ಮಹಿಳೆಯರಿಬ್ಬರ ಆಡಿಯೋ ಸಂಭಾಷಣೆ ವಿಚಾರ.. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು - Etv bharat Kannada

ಮಠಾಧೀಶರ ಬಗ್ಗೆ ಮಹಿಳೆಯರ ನಡುವಿನ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ, ಆಡಿಯೋದಲ್ಲಿ ಹೇಳಲಾದ ಸ್ವಾಮೀಜಿಗಳಲ್ಲಿ ಒಬ್ಬರಾದ ಗುರುಬಸವ ಮಹಾಮನೆ ಬಸವಾನಂದ ಸ್ವಾಮೀಜಿಗಳು ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ತಪ್ಪಿತಸ್ಥರಿಗೆ ಕಾನೂನು ರೀತ್ಯ ಶಿಕ್ಷೆಯಾಗಬೇಕೆಂದು ಅವರು ಹೇಳಿದ್ದಾರೆ.

basavananda-swamiji-reaction-on-basavsiddalinga-swamiji-suiside-case
ಮಠಾಧೀಶರ ಬಗ್ಗೆ ಮಹಿಳೆಯರಿಬ್ಬರ ಆಡಿಯೋ ಸಂಭಾಷಣೆ ವಿಚಾರ..ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು
author img

By

Published : Sep 5, 2022, 6:14 PM IST

ಧಾರವಾಡ: ಮಠಾಧೀಶರ ಬಗ್ಗೆ ಮಹಿಳೆಯರಿಬ್ಬರ ನಡುವಿನ ಆಡಿಯೋ ಸಂಭಾಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಆಡಿಯೋದಲ್ಲಿ ಹೇಳಿದ್ದ, ನೇಗಿನಹಾಳ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಆಡಿಯೋದಲ್ಲಿ ಉಲ್ಲೇಖಿಸಲಾದ ಸ್ವಾಮೀಜಿಗಳಲ್ಲಿ ಒಬ್ಬರಾದ ಗುರುಬಸವ ಮಹಾಮನೆ ಬಸವಾನಂದ ಸ್ವಾಮೀಜಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‌

ತಾಲೂಕಿನ ಮನಗುಂಡಿಯಲ್ಲಿರುವ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೈರಲ್ ಆದ ಆಡಿಯೋ‌ ನಾನು ಕೇಳಿಸಿಕೊಂಡೆ. ಇದರಲ್ಲಿ ಸತ್ಯಕ್ಕ ಎಂಬವರು 7 ಸ್ವಾಮೀಜಿಗಳ ಹೆಸರು ಉಲ್ಲೇಖಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅವರು 6ನೇ ತರಗತಿಯಿದ್ದಾಗಿನಿಂದಲೂ ನಾನು ನೋಡಿದ್ದೆನೆ. ಇತ್ತೀಚಿನ 10 ವರ್ಷಗಳಿಂದ ಅವರು ಎಲ್ಲಿದ್ದಾರೆ ಎಂಬುದು ನಮ್ಮ ಗಮನಕ್ಕೆ ಇಲ್ಲ. ಈ ಹಿಂದೆ 2018ರಲ್ಲಿ ನನ್ನ ಹತ್ತಿರ ಬಂದಿದ್ದರು.

ಈ ಸಂದರ್ಭ ನಾನು ಬೀದರ್ ಗೆ ಕಳುಹಿಸಿಕೊಟ್ಟಿದ್ದೆ. ಬಳಿಕ ಎಲ್ಲಿಗೆ ಹೋದರು ಎಂದು ಗೊತ್ತಿಲ್ಲ. ಆದಾದ ಬಳಿಕ ಆಕೆ ತಮಿಳುನಾಡಿನವನ ಜೊತೆ ಮದುವೆ ಮಾಡಿಕೊಂಡಿದ್ದರು. ಜೊತೆಗೆ ಎರಡು ಮಕ್ಕಳು ಇದಾವೆ. ಅವರು ಮಠದಲ್ಲಿ ಭದ್ರತೆ ಇಲ್ಲ ಎನ್ನುತ್ತಾರೆ. ಆಕೆ ಮಠದಲ್ಲಿ ಇದ್ದಾಗ ನಾನು ಮಠದಲ್ಲಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

ಮಠಾಧೀಶರ ಬಗ್ಗೆ ಮಹಿಳೆಯರಿಬ್ಬರ ಆಡಿಯೋ ಸಂಭಾಷಣೆ ವಿಚಾರ..ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು

ಈ ಹಿಂದೆ ನನ್ನ ಬಳಿ ಬಂದು ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು. ನನಗೆ ನಿದ್ದೆ ಬರಲ್ಲ ಎಂದು ಹೇಳಿಕೊಂಡು ಬಂದಿದ್ದರು. ಅವರಿಗೆ ಮಾನಸಿಕ ಅಸ್ವಸ್ಥತೆ ಇದೆಯೋ ಏನೋ‌ ಗೊತ್ತಿಲ್ಲ. ಆಕೆ ರುದ್ರಮ್ಮ ಎಂಬಾಕೆ ಜೊತೆ ಮಾತನಾಡಿದ್ದಾರೆ. ಆ ರುದ್ರಮ್ಮ ಕೂಡಾ ಬೇಜವಾಬ್ದಾರಿ ಹೆಣ್ಣು ಮಗಳು. ಇಷ್ಟು ಜನರ ಹೆಸರು ಹೇಳಿದಾಗ ಅದು ಸರಿನಾ ಎಂದು ನೋಡಬೇಕಿತ್ತು.ಅವರಿಗೆ ಅಪರಿಚಿತ ಸ್ವಾಮೀಜಿಗಳು ಯಾರೂ ಇಲ್ಲ. ಈ ಬಗ್ಗೆ ಸ್ವಾಮಿಗಳಲ್ಲಿ ಮಾತನಾಡಿಸಬಹುದಿತ್ತು ಎಂದು ಹೇಳಿದರು.

ಸರ್ಕಾರ ಪ್ರಕರಣದ ಬಗ್ಗೆ ಗಮನ ಹರಿಸಲಿ : ಇದೀಗ ಅವರು ಒಂದು ಜೀವವನ್ನು ಬಲಿ ಪಡೆದಿದ್ದಾರೆ. ಇದಕ್ಕೆ ಯಾರು ಜವಾಬ್ದಾರಿ. ಸಮಾಜದಲ್ಲಿ ಇದಕ್ಕೆ ಶಿಕ್ಷೆ ಇಲ್ವಾ. ಸ್ವಾಮೀಜಿ ಒಬ್ಬ ಜವಾಬ್ದಾರಿ ಸ್ಥಾನದಲ್ಲಿ ಇದ್ದುಕೊಂಡು, ಹಲವು ಯುವಕರ ದುಶ್ಚಟಗಳನ್ನು ಬಿಡಿಸಿದ್ದರು. ಇದೀಗ ಸ್ವಾಮೀಜಿ ಅವರು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನೆಟ್ಟಿಗರೂ ಕೂಡ ಜವಾಬ್ದಾರಿಯುತವಾಗಿ ವರ್ತನೆ ಮಾಡಬೇಕು. ಯಾರೋ ಮಾಡಿದ ಆಪಾದನೆಗೆ‌ ವೈರಲ್ ಮಾಡುವುದು ಸರಿಯಲ್ಲ. ಸ್ವಾಮೀಜಿ ಕೆಲಸ ಮಾಡಿದ್ದನ್ನು ನೋಡಿರುತ್ತಿರಿ. ಇನ್ನು ಮಹಿಳೆಯರು ಹೇಳಿದ್ದೇ ಸರಿಯಾಗಿದ್ದರೆ ಸ್ವಾಮೀಜಿಗಳ ಮೇಲೆ ಕಾನೂನುಕ್ರಮವಾಗಲಿ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ವಿಚಾರಣೆ ನಡೆಯಬೇಕು. ನಿರ್ಣಯ ಹೊರ ಬರಬೇಕು ಎಂದು ಹೇಳಿದರು.

ಇದನ್ನೂ ಓದಿ : ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ​: ಆಡಿಯೋದಲ್ಲಿ ಮಾತನಾಡಿದ ಮಹಿಳೆಯರ ಬಂಧನಕ್ಕೆ ಭಕ್ತರ ಪಟ್ಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.