ETV Bharat / state

ದಲಿತ ಯುವಕನ ಕೊಲೆ ಪ್ರಕರಣ....ಬಹುಜನ ಸಮಾಜ ಪಾರ್ಟಿ ಕಾರ್ಯಕರ್ತರ ಪ್ರತಿಭಟನೆ! - protest in hubli

ಹುಬ್ಬಳ್ಳಿ-ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದ ದಲಿತ ಯುವಕನ ಕೊಲೆ ಪ್ರಕರಣ ಖಂಡಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

bahujan samajvadi party protest in hubli
ದಲಿತ ಯುವಕನ ಕೊಲೆ ಪ್ರಕರಣ
author img

By

Published : Aug 31, 2020, 6:31 PM IST

Updated : Aug 31, 2020, 6:38 PM IST

ಹುಬ್ಬಳ್ಳಿ:ಮೇಲ್ಜಾತಿಯ ಯುವಕರೊಂದಿಗೆ ಸರಿಸಮನಾಗಿ ಕುಳಿತಿದ್ದಕ್ಕೆ ದಲಿತ ಯುವಕನ ಕೊಲೆ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿದೆ.

ದಲಿತ ಯುವಕನ ಕೊಲೆ ಪ್ರಕರಣ

ಹುಬ್ಬಳ್ಳಿ-ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ದೇವಸ್ಥಾನದ ಕಟ್ಟೆ ಮೇಲೆ ಮೇಲ್ಜಾತಿ ಯವಕರೊಂದಿಗೆ ಕುಳಿತ ಕಾರಣಕ್ಕೆ 28 ವರ್ಷ ದಲಿತ ಯುವಕನ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ‌ ತಹಶೀಲ್ದಾರ್​​ ಕಚೇರಿ ಎದುರು ಪ್ರತಿಭಟನೆ ಮಾಡಿದ ಕಾರ್ಯಕರ್ತರು, ನಿರಂತರವಾಗಿ ದಲಿತರ ಮೆಲೆ ಹಲ್ಲೆಯಾಗುತ್ತಿದೆ. ಅದೇ ರೀತಿ ಬೂದಿಹಾಳ ಗ್ರಾಮದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೃತ ಯುವಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ. ಆದರೆ ಮೇಲ್ಜಾತಿಯವರ ಜೊತೆ ಸರಿಸಮಾನಾಗಿ ಕುಳಿತುಕೊಂಡಿದ್ದ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎಂದು ಬಲವಾಗಿ ಆರೋಪಿಸಿದರು. ಕೂಡಲೇ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರರ ಮೂಲಕ ಸಿಎಂ ಮನವಿ ಸಲ್ಲಿಸಿದರು.

Last Updated : Aug 31, 2020, 6:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.