ETV Bharat / state

ಕಳೆದುಕೊಂಡಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಹುಬ್ಬಳ್ಳಿಯ ಟ್ರಾಫಿಕ್ ಪೊಲೀಸ್ - ಈಟಿವಿ ಭಾರತ ಕನ್ನಡ

ದೀಪಾವಳಿಯಂದು ಮಾರುಕಟ್ಟೆಗೆ ತೆರಳುತ್ತಿದ್ದ ಮಹಿಳೆಯು ಬ್ಯಾಗ್​ ಕಳೆದುಕೊಂಡಿದ್ದು, ಅದನ್ನು ವಾಪಸ್​ ಮರಳಿಸುವ ಮೂಲಕ ಟ್ರಾಫಿಕ್​ ಪೊಲೀಸ್​​ ಪ್ರಾಮಾಣಿಕತೆ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

bag-returned-by-honest-traffic-police-in-hubballi
ಬ್ಯಾಗ್ ಕಳೆದುಕೊಂಡವರಿಗೆ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಟ್ರಾಫಿಕ್ ಪೊಲೀಸ್
author img

By

Published : Oct 27, 2022, 4:23 PM IST

ಹುಬ್ಬಳ್ಳಿ : ಬ್ಯಾಗ್​ ಕಳೆದುಕೊಂಡ ಮಹಿಳೆಗೆ ದಕ್ಷಿಣ ಸಂಚಾರಿ ಠಾಣೆಯ ಟ್ರಾಫಿಕ್ ಪೊಲೀಸರೋರ್ವರು ಬ್ಯಾಗ್​​ ಮರಳಿಸಿ ಪ್ರಾಮಾಣಿಕತೆ ಮೆರೆದಿರುವ ಘಟನೆ ನಡೆದಿದೆ.

ದೀಪಾವಳಿಯಂದು ಕೇಶ್ವಾಪೂರ ನಿವಾಸಿ ಲಕ್ಷ್ಮೀ ಅಮರಾವತಿ ಎಂಬುವರು ಆಟೋದಲ್ಲಿ ಮಾರುಕಟ್ಟೆಗೆ ತೆರಳುತ್ತಿದ್ದರು. ಈ ಸಂದರ್ಭ ಚಿಟಗುಪ್ಪಿ ಆಸ್ಪತ್ರೆ ಬಳಿಯ ತಿರುವಿನಲ್ಲಿ ಮಹಿಳೆಯ ಬ್ಯಾಗ್ ಕೆಳಗೆ ಬಿದ್ದಿದೆ. ಇದನ್ನು ಗಮನಿಸದ ಮಹಿಳೆ ಮಾರುಕಟ್ಟೆಗೆ ತೆರಳಿದ್ದಾರೆ. ಬಳಿಕ ಮಾರುಕಟ್ಟೆಯಲ್ಲಿ ತಮ್ಮ ಹಣವಿದ್ದ ಬ್ಯಾಗ್​ ಕಳೆದುಕೊಂಡಿರುವುದು ಗಮನಕ್ಕೆ ಬಂದಿದೆ.

ಬ್ಯಾಗ್ ಕಳೆದುಕೊಂಡವರಿಗೆ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಟ್ರಾಫಿಕ್ ಪೊಲೀಸ್

ಮಹಿಳೆ ಕಳೆದುಕೊಂಡ ಬ್ಯಾಗ್​​ ಇದೇ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸ್ ಸಂತೋಷ್​ ಪವಾರ್ ಅವರಿಗೆ ಸಿಕ್ಕಿದೆ. ತಕ್ಷಣ ಉಪನಗರ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಬಳಿಕ ಆ ಬ್ಯಾಗಿನಲ್ಲಿದ್ದ ಮೊಬೈಲ್ ಗೆ ಕರೆ ಮಾಡಿ ಬ್ಯಾಗ್​ ಕಳೆದುಕೊಂಡ ಮಹಿಳೆಯ ಪತಿಗೆ ಹಿಂತಿರುಗಿಸಿದ್ದಾರೆ. ಬ್ಯಾಗ್​​ನಲ್ಲಿ 48 ಸಾವಿರ ರೂ. ಹಣ ಹಾಗೂ ಫೋನ್ ಇತ್ತು. ಟ್ರಾಫಿಕ್ ಪೊಲೀಸ್ ಅವರ ಈ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಕೃಷ್ಣಾ ನದಿಯಲ್ಲಿ ಸಾಹಸ... ಬೋಟ್​​​ಗಳಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿ ಕಬ್ಬು ಸಾಗಿಸಿದ ರೈತರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.