ಹುಬ್ಬಳ್ಳಿ: ಮಾಸ್ಕ್ ಧರಿಸದೇ ಇರುವವರಿಗೆ ದಂಡ ವಿಧಿಸಲು ಸರ್ಕಾರ ನಿರ್ಧಾರ ಮಾಡಿದ ಬೆನ್ನಲ್ಲೇ ಇತ್ತ ಪೊಲೀಸರು ಮಾಸ್ಕ್ ಇಲ್ಲದೇ ಓಡಾಡುತ್ತಿದ್ದವರಿಗೆ ದಂಡ ಹಾಕಿ ಎಚ್ಚರಿಕೆ ನೀಡುತ್ತಿದ್ದಾರೆ.
ಇಂದು ನಗರದ ಚೆನ್ನಮ್ಮ ವೃತ್ತದಲ್ಲಿ ಮಾಸ್ಕ್‌ನ ಅರಿವೇ ಇಲ್ಲದೇ ಬೇಕಾಬಿಟ್ಟಿ ಓಡಾಡುತ್ತಿದ್ದ ಜನರಿಗೆ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ರವಿಚಂದ್ರ ಬಡಾಪಕ್ಕಿರಪ್ಪ ಅವರ ನೇತೃತ್ವದಲ್ಲಿ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ. ಮಾಸ್ಕ್ ಹಾಕದೇ ರಸ್ತೆಗಿಳಿಯುತ್ತಿದ್ದ ವಾಹನ ಚಾಲಕರು ದಂಡ ಪಾವತಿಸಲು ಒಪ್ಪದ ಕಾರಣ ಅವರ ಹಾಗೂ ಪೊಲೀಸರ ಮಧ್ಯೆ ವಾಗ್ವಾದ ಏರ್ಪಡುತ್ತಿದ್ದ ಘಟನೆಗಳೂ ನಡೆದವು. ಆದರೆ, ಮಾಸ್ಕ್ ಹಾಕದವರ ಬಳಿ ಪೊಲೀಸರು ಮುಲಾಜಿಲ್ಲದೇ ದಂಡ ವಸೂಲಿ ಮಾಡಿದರು.