ಧಾರವಾಡ: ಗ್ಯಾಸ್ ಏಜೆನ್ಸಿ ಕಚೇರಿಗೆ ನುಗ್ಗಿ ಯುವಕರು ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಧಾರವಾಡದ ಡಿಹೆಚ್‌ಎ ಕಚೇರಿ ಎದುರು ಈ ಘಟನೆ ನಡೆದಿದೆ.
ಹಲ್ಲೆ ಮಾಡಲು ಹೋದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರತ್ನ ನರಗುಂದ, ಹಲ್ಲೆಗೊಳಗಾದ ಮಹಿಳೆ. ಭರತ ಮತ್ತು ಮಂಜುನಾಥ ಹಲ್ಲೆ ಮಾಡಿದ ಆರೋಪಿಗಳು. ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುವ ಮಹಿಳೆ ಜತೆ ಜಗಳ ವಿಕೋಪಕ್ಕೆ ಹೋಗಿ ಬಡಿಗೆಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಯುವಕರಿಬ್ಬರೂ ನನಗೆ (ಹಲ್ಲೆಗೊಳಗಾದ ಮಹಿಳೆ) ಪರಿಚಯವಿದ್ದು, ವಿನಾಕಾರಣ ಜಗಳ ತೆಗೆದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆ ಯುವಕರ ವಿರುದ್ಧ ಉಪನಗರ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ಸಿಗರಿಗೆ ಮುಸಲ್ಮಾನರೇ ತಂದೆ-ತಾಯಿ, ಕೈ ಮುಸಲ್ಮಾನರ ಪಕ್ಷ ಎಂದು ರಾಹುಲ್ ಹೇಳಿದ್ದಾರಲ್ಲ: ಬಿಜೆಪಿ ಮುಖಂಡ