ಧಾರವಾಡ: ಲಾಕ್‌ಡೌನ್ ಉಲ್ಲಂಘಿಸಿ ಪಾರ್ಟಿ ಮಾಡುತ್ತಿದ್ದ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಧಾರವಾಡದ ಬಾರಾ ಇಮಾಮ್ ಗಲ್ಲಿಯಲ್ಲಿ ಸ್ನೇಹಿತರು ಸೇರಿಕೊಂಡು ಜನ್ಮದಿನದ ಪ್ರಯುಕ್ತ ಈ ಭರ್ಜರಿ ಪಾರ್ಟಿ ನಡೆಸಿದ್ದರು. ಇವರು ಮನೆಯ ಹೊರಗೆ ದೊಡ್ಡ ಪಾತ್ರೆಯಲ್ಲಿ ಸಾಕಷ್ಟು ಜನರಿಗೆ ಆಗುವಷ್ಟು ಬಿರಿಯಾನಿ ಮಾಡಿದ್ದರು. ವೈರಲ್ ಆಗಿರುವ ವಿಡಿಯೋದಲ್ಲಿ ಹಲವರು ಸೇರಿದ್ದು ಕಾಣುತ್ತದೆ.
ವಿಡಿಯೋ ಪರಿಶೀಲಿಸಿದ ಶಹರ ಠಾಣೆ ಪೊಲೀಸರು ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಿಕೊಂಡು ಐವರನ್ನು ಅರೆಸ್ಟ್ ಮಾಡಿದ್ದಾರೆ.