ಹುಬ್ಬಳ್ಳಿ: ಜೇಮ್ಸ್ ಸಿನಿಮಾ ಬಿಡುಗಡೆ ಒಂದು ಕಡೆಯಾದ್ರೆ, ಮತ್ತೊಂದೆಡೆ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನದ ಸಂಭ್ರಮ. ಈ ಸಂಭ್ರಮವನ್ನು ಹುಬ್ಬಳ್ಳಿಯಲ್ಲಿ ಮಹಿಳಾ ಫ್ಯಾನ್ಸ್ ಅದ್ಧೂರಿಯಾಗಿ ಸ್ಟೆಪ್ ಹಾಕುವ ಮೂಲಕ ಸಂಭ್ರಮಿಸಿದ್ದಾರೆ.
ವಾಣಿಜ್ಯನಗರಿಯ ಅಪ್ಸರಾ ಥಿಯೇಟರ್ ಮುಂದೆ ಪುರುಷರಿಗೆ ನಾವೇನೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ, ಪುನೀತ್ ಅಭಿಮಾನಿಗಳಾದ ಯುವತಿಯರು ಸಖತ್ ಸ್ಟೆಪ್ ಹಾಕಿದ್ದಾರೆ. ಅವರಿಗೆ ಎಲ್ಲರೂ ಚಪ್ಪಾಳೆ ಹಾಗೂ ವಿಶಲ್ ಹಾಕುವ ಮೂಲಕ ಹುರಿದುಂಬಿಸಿದರು.
ಜೇಮ್ಸ್ ಚಿತ್ರದಲ್ಲಿ ಪುನೀತ್ ಎಂಟ್ರಿ ಕಂಡು ಕಣ್ಣೀರು ಹಾಕಿದ ಅಭಿಮಾನಿ: ರಾಜವಂಶದ ಕುಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಕರುನಾಡು ಮಾತ್ರವಲ್ಲದೇ ದೇಶಕ್ಕೆ ದೇಶವೇ ಕಂಬನಿ ಮಿಡಿದಿತ್ತು. ಇಂದು ಜೇಮ್ಸ್ ಸಿನಿಮಾ ನೋಡಿದ ಅಭಿಮಾನಿಯೊಬ್ಬ ಅವರನ್ನು ನೆನಪಿಸಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಇದನ್ನೂ ಓದಿ: ಬೆಳ್ಳಿತೆರೆ ಮೇಲೆ ಅಪ್ಪು ನೋಡಿ ಭಾವುಕರಾದ ರಾಘಣ್ಣ, ಶ್ರೀಮುರಳಿ, ಯುವ ರಾಜ್ಕುಮಾರ್
ಹುಬ್ಬಳ್ಳಿಯ ರಾಘು ವದ್ದಿ ಪುನೀತ್ ಅಭಿಮಾನಿಯಾಗಿದ್ದು, ಅವರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಜೇಮ್ಸ್ ಸಿನಿಮಾದಲ್ಲಿ ಪುನೀತ್ ಎಂಟ್ರಿ ನೋಡಿದ ತಕ್ಷಣ ಇವರಿಗೆ ದುಃಖ ಉಮ್ಮಳಿಸಿ ಬಂದಿದೆ. ಅಲ್ಲದೇ ಪುನೀತ್ ಹುಬ್ಬಳ್ಳಿಗೆ ಬಂದಾಗ ರಘು ಅವರ ಮನೆಗೆ ಬರುತ್ತಿದ್ದುದನ್ನು ನೆನೆದು ಕಣ್ಣೀರು ಸುರಿಸುವ ಮೂಲಕ ದುಃಖವನ್ನು ಹೊರಹಾಕಿದ್ದಾರೆ.