ಧಾರವಾಡ: ಭೂಮಿ ಅಗೆಯುವಾಗ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ವಿಗ್ರಹ ಪತ್ತೆಯಾಗಿದೆ. ಪತ್ತೆಯಾದ ವಿಗ್ರಹವನ್ನು ಚೋವೀಸ್ ತೀರ್ಥಂಕರರ ವಿಗ್ರಹ ಎಂದು ಗುರುತಿಸಲಾಗಿದೆ.
ಜೆಸಿಬಿಯಿಂದ ನೆಲ ಅಗೆಯುತ್ತಿದ್ದಾಗ ಸುಮಾರು 10 ಅಡಿ ಆಳದಲ್ಲಿ ಈ ವಿಗ್ರಹ ಪತ್ತೆಯಾಗಿದೆ. ಇದು ಸುಮಾರು 8ನೇ ಶತಮಾನದಷ್ಟು ಹಿಂದಿನದ್ದು ಇರಬಹುದೆಂದು ಅಂದಾಜಿಸಲಾಗಿದೆ. ಮುನಿಶ್ರೀ ಪ್ರಸಂಗಸಾಗರ ಮಹಾರಾಜರಿಂದ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಗಿದೆ.
ಪತ್ತೆಯಾದ ವಿಗ್ರಹ ನೋಡಲು ಜನ ಹರಿದು ಬರುತ್ತಿದ್ದಾರೆ. ಇದೇ ಜಾಗದಲ್ಲಿ ಕೆಲವು ವರ್ಷಗಳ ಹಿಂದೆ ಭಾಗವಾನ್ ಆದಿನಾಥರ ಹಾಗೂ ಭಗವಾನ್ ವಿಮಲನಾಥ ತೀರ್ಥಂಕರ ಮೂರ್ತಿಗಳು ದೊರೆತಿದ್ದವು ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ರವೀಂದ್ರನಾಥ ಟ್ಯಾಗೋರ್ ಕಡಲತೀರ ಸ್ವಚ್ಛಗೊಳಿಸಿದ ಡಿಸಿ, ಎಸ್ಪಿ