ಹುಬ್ಬಳ್ಳಿ: ಮಾಜಿ ಸಚಿವ ದಿವಂಗತ ಅನಂತಕುಮಾರ್ ಪ್ರಾಮಾಣಿಕ ಬಿಜೆಪಿ ನಾಯಕನಾಗಿದ್ದು, ಬಿಜೆಪಿ ಪಕ್ಷವನ್ನು ಕಟ್ಟಲು ಬಹಳ ಶ್ರಮಪಟ್ಟಿದ್ದಾರೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗೋಕುಲರಸ್ತೆಯ ಗೋಕುಲ ಗಾರ್ಡನ್ನಲ್ಲಿ ಅನಂತಕುಮಾರ್ ಅವರ ಪ್ರಥಮ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 'ಅನಂತ ಸ್ಮರಣೆ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನಂತಕುಮಾರ್ ಸೃಜನಶೀಲ, ಸರಳ ವ್ಯಕ್ತಿತ್ವ ಹೊಂದಿದವರಾಗಿದ್ದು, ಅವರು ಕೇಂದ್ರ ಸಚಿವರಾಗಿದ್ದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅಲ್ಲದೇ ಕರ್ನಾಟಕದ ವಿಚಾರ ಬಂದರೆ ಮುಂದೆ ನಿಂತು ಸಮಸ್ಯೆ ಬಗೆಹರಿಸುತ್ತಿದ್ದರು. ಇಂತಹ ಮಹಾನ್ ಚೇತನ ಅಗಲಿಕೆ
ನಂತರ ಮಾತನಾಡಿದ ದಿವಂಗತ ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರು ನನ್ನ ಪತಿ ಬಿಜೆಪಿಯಲ್ಲಿ ಉತ್ತಮ ನಾಯಕರಾಗಿದ್ರು, ಕರ್ನಾಟಕ ಬಹುತೇಕ ನಗರದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣದ ಗುರಿಯನ್ನು ಅವರು ಹೊಂದಿದ್ದರು. ಪರಿಸರದ ಬಗ್ಗೆ ಅವರಿಗೆ ಅಪಾರ ಕಾಳಜಿ ಇತ್ತು. ಎಲ್ಲರೂ ಪರಿಸರ ಉಳಿಸಬೇಕು ಎಂದು ಹಲವಾರು ಬಾರಿ ಮನವಿ ಮಾಡುತ್ತಿದ್ರು. ಸೃಜನಶೀಲ ಹಾಗೂ ಎಲ್ಲರೊಡನೆ ಒಳ್ಳೆಯ ಬಾಂಧವ್ಯದಿಂದ ಇರುತ್ತಿದ್ದರು, ಅವರ ಅಗಲಿಕೆ ನಮ್ಮ ಕುಟುಂಬಕ್ಕೆ ತುಂಬಲಾರದ ನಷ್ಟ ಎಂದರು.