ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಎಲ್ಲಾ ಮತದಾರರು ಭಾಗವಹಿಸಿ ಮತ ಚಲಾಯಿಸುವಂತೆ ಪ್ರೇರಿಪಿಸುವ ದೃಷ್ಟಿಯಿಂದ ಜಿಲ್ಲಾ ಚುನಾವಣಾ ಇಲಾಖೆ ವಿನೂತನ ಪ್ರಯತ್ನ ಮಾಡಿದೆ.
ಹುಬ್ಬಳ್ಳಿಯಲ್ಲಿ ಪುಷ್ಪ ಪ್ರದರ್ಶನ ಆಯೋಜಿಸುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಕ್ಕೆ ಚಾಲನೆ ನೀಡಲಾಯಿತು. ನಗರದ ಇಂದಿರಾ ಗಾಜಿನ ಮನೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರೋ ಪುಷ್ಪ ಪ್ರದರ್ಶನ- ಮತದಾನ ಜಾಗೃತಿಯನ್ನು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಉದ್ಘಾಟನೆ ಮಾಡಿದರು.
ಜಿಲ್ಲೆಯಲ್ಲಿನ ಮತದಾರರನ್ನು ಮತದಾನಕ್ಕೆ ಪ್ರೇರೇಪಿಸುವ ದೃಷ್ಠಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲ ಯುವಕರು ತಪ್ಪದೆ ಲೊಕಸಭಾ ಚುನಾವಣೆ ಮತದಾನದಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಚಲಾವಣೆ ಮಾಡಬೇಕು ಎಂದರು.
ಯಾವುದೇ ಅಭ್ಯರ್ಥಿಗಳ ಆಮಿಶಕ್ಕೆ ಬಲಿಯಾಗದೇ ತಮ್ಮ ಮತವನ್ನು ಚಲಾವಣೆ ಮಾಡಬೇಕು ಎಂದು ನೆರೆದಿದ್ದ ಹೊಸ ಮತದಾರರಿಗೆ ಕಿವಿ ಮಾತು ಹೇಳಿದರು.
ಇನ್ನೂ ಚುನಾವಣಾ ಆಯೋಗ, ಧಾರವಾಡ ಜಿಲ್ಲಾಡಳಿತ, ಹಾಗೂ ತೋಟಗಾರಿಕೆ ಇಲಾಖೆ ಸಂಯೋಗದಲ್ಲಿ ಕೆಂಪು ಹಳದಿ ಹೂಗಳಲ್ಲಿ ಕರ್ನಾಟಕ ಲಾಂಛನ, ವಿವಿ ಪ್ಯಾಟ್, ಹಾಗೂ ವೋಟಿಂಗ್ ಮಷಿನ್ ನೋಡುಗರ ಗಮನ ಸೆಳೆದಿದ್ದು, ಹೂವಲ್ಲಿ ಅಲಂಕರಿಸಲಾಗಿದ್ದ, ವಿವಿ ಪ್ಯಾಟ್, ಕರ್ನಾಟಕ ಲಾಂಛನದ ಜೊತೆಗೆ ಸೆಲ್ಫಿ ಕ್ಲಿಕಿಸಿಕೊಂಡರು.