ETV Bharat / state

ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಗೆ ಬಿಜೆಪಿ ನಾಯಕರಿಂದಲೇ ಅಪಸ್ವರ: ತನಿಖೆಗೆ ಆಗ್ರಹಿಸಿದ ಮೇಯರ್‌

ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಲ್ಲಿ ನಡೆದಿರುವ ಸ್ಮಾರ್ಟ್​ ಸಿಟಿ ಯೋಜನೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವುದಾಗಿ ಹು-ಧಾ ಬಿಜೆಪಿ ಮೇಯರ್‌ ಈರೇಶ ಅಂಚಟಗೇರಿ ಆರೋಪಿಸಿದ್ದಾರೆ.

allegation-of-irregularities-in-smart-city-project
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವ್ಯವಹಾರ ಆರೋಪ : ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ ಮೇಯರ್​
author img

By

Published : Jun 14, 2023, 4:57 PM IST

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವ್ಯವಹಾರ ಆರೋಪ : ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ ಮೇಯರ್​

ಧಾರವಾಡ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಹಾಗೂ ಪ್ರಧಾನಿ‌ ನರೇಂದ್ರ ಮೋದಿ ಅವರ ಕನಸಿನ ಕೂಸು ಸ್ಮಾರ್ಟ್ ಸಿಟಿ ಯೋಜನೆಗೆ ಬಿಜೆಪಿ ನಾಯಕರಿಂದಲೇ ಅಪಸ್ವರ ಕೇಳಿಬಂದಿದೆ. ಬಿಜೆಪಿ ಮೇಯರ್‌ ಈರೇಶ ಅಂಚಟಗೇರಿ ಅವರು ನಗರದಲ್ಲಿ ಕೈಗೊಳ್ಳಲಾಗಿರುವ ಸ್ಮಾರ್ಟ್​ ಸಿಟಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವುದಾಗಿ ಆರೋಪಿಸಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರ ತವರಲ್ಲೇ ಸ್ಮಾರ್ಟ್ ಸಿಟಿ ಯೋಜನೆ ವಿಫಲವಾಗಿದೆಯಾ?. ಸ್ಮಾರ್ಟ್​ ಯೋಜನೆ ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಸಂಸದರು ವಿಫಲರಾಗಿದ್ದಾರಾ ಎಂಬ ಅನುಮಾನ ಮೂಡಿದೆ. ಜೋಶಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಹು-ಧಾ ಮೇಯರ್ ಈರೇಶ ಅಂಚಟಗೇರಿ ಸ್ಮಾರ್ಟ್ ‌ಸಿಟಿ ಕಾಮಗಾರಿ ಅಸಮರ್ಪಕವಾಗಿವೆ ಎಂದು ದೂರಿದ್ದಾರೆ.

ಅಧಿಕಾರದಿಂದ ಇಳಿಯುವ ಕೆಲವೇ ದಿನಗಳು ಬಾಕಿ ಇರುವಾಗ ಬಿಜೆಪಿ ಹು-ಧಾ ಮೇಯರ್ ಅಂಚಟಗೇರಿ ಈ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಪಾಲಿಕೆ ವತಿಯಿಂದ ತನಿಖೆ ಕೈಗೊಳ್ಳುವಂತೆ ಕಮಿಷನರ್ ಗೋಪಾಲಕೃಷ್ಣ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಯಶಸ್ವಿ ಆಗಿಲ್ಲ, ಧಾರವಾಡ ಮತ್ತು ಹುಬ್ಬಳ್ಳಿ ಅವಳಿ ನಗರಗಳು ಕೇಂದ್ರ ಸರ್ಕಾರದ ಎರಡನೇ ಹಂತದ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಆಗಿತ್ತು. ಇಲ್ಲಿಯವರೆಗೆ 823.58 ಕೋಟಿ ಅನುದಾನ ಬಳಕೆ ಮಾಡಲಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸ್ಮಾರ್ಟ್ ಸಿಟಿ ಕಾಮಗಾರಿ ಯಶಸ್ವಿ ಆಗಿಲ್ಲ ಎಂದು ಮೇಯರ್ ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆ ಕಾರ್ಯರೂಪವೇ ಸರಿಯಾಗಿ ಆಗಿಲ್ಲ. ಈ ಬಗ್ಗೆ ಮೇ 5 ತಾರೀಕಿನಂದು ನಾನು ಮಹಾಪೌರನಾದ ನಾನು ಯಾವುದೆಲ್ಲ ಕಾಮಗಾರಿ ನಡೆದಿದೆ. ಯಾವುದೆಲ್ಲ ಕಾಮಗಾರಿ ಚಲಾವಣೆಯಲ್ಲಿ ಇದೆ. ಅಲ್ಲದೆ ಈ ಕಾಮಗಾರಿಗಳು ವಿಳಂಬವಾಗುತ್ತಿರುವ ಬಗ್ಗೆ ಕಮಿಷನರ್ ಗೋಪಾಲಕೃಷ್ಣ ಪತ್ರ ಬರೆದಿದ್ದೆ. ಬಳಿಕ ಸ್ಮಾರ್ಟ್ ಸಿಟಿ ಯೋಜನೆಯ ಗುಣಮಟ್ಟದ ಕಾಮಗಾರಿಗಾಗಿ ನಾಲ್ಕು ಜನರ ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಆದರೆ ಸ್ಮಾರ್ಟ್​ ಸಿಟಿ ಯೋಜನೆಯ ಅಧಿಕಾರಿಗಳು ತಾಂತ್ರಿಕ ಸಮಿತಿ‌ಗೆ ಮಾಹಿತಿ ನೀಡಿಲ್ಲ. ಈ ಬಗ್ಗೆ ಕೇಂದ್ರ ಸಚಿವರ ಮೂಲಕ ಹಲವಾರು ಆಯುಕ್ತರ ಗಮನಕ್ಕೆ ತಂದಿದ್ದೇನೆ.

ಹೀಗಾಗಿ ಸ್ಮಾರ್ಟ್​ ಸಿಟಿ ಯೋಜನೆಯ ಅವ್ಯವಹಾರದಲ್ಲಿನ ಲೋಕಾಯಕ್ತ ತನಿಖೆಗೆ ಆಗ್ರಹಿಸಿ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಐದು ವರ್ಷಗಳಲ್ಲಿ ಆಗಿರುವ ಕಾಮಗಾರಿ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವಂತೆ ಪತ್ರದಲ್ಲಿ ಕೋರಿದ್ದೇನೆ. ಅದರ ಪ್ರತಿಗಳನ್ನು ಪ್ರಧಾನಿ ನರೇಂದ್ರ ‌ಮೋದಿ, ಕೇಂದ್ರ ಸಚಿವ ಹರ್ದೀಪ್‌ಸಿಂಗ್ ಪುರಿ, ಕರ್ನಾಟಕ ಲೋಕಾಯಕ್ತ ನ್ಯಾಯಮೂರ್ತಿಗೆ ರವಾನೆ ಮಾಡಲಾಗಿದೆ. ಈ ಅವ್ಯಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳೂ ಸೇರಿದಂತೆ ಎಲ್ಲರಿಗೂ ಶಿಕ್ಷೆ ಆಗಬೇಕು ಎಂದು ಮೇಯರ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಸುರ್ಜೇವಾಲಾ ಸಭೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಭಾಗಿ: ಬಿಜೆಪಿಯ ಆರೋಪಗಳಿಗೆ ನಾವು ಉತ್ತರ ನೀಡಲು ಆಗುವುದಿಲ್ಲ - ತುಷಾರ್ ಗಿರಿನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.