ETV Bharat / state

ಬಡವರ ಕೈಗೆ ಪಡಿತರ ಸೇರಿದಾಗಲೇ ನನಗೆ ತೃಪ್ತಿ: ಆಹಾರ ಸಚಿವ - poor families

ನನ್ನ ಕುಟುಂಬದ ಇತಿಹಾಸ ತಿಳಿದೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನನಗೆ ಈ ಜವಾಬ್ದಾರಿಯುತವಾದ ಖಾತೆ ನೀಡಿದ್ದಾರೆ ಎಂದು ಆಹಾರ ಸಚಿವ ಗೋಪಾಲಯ್ಯ ಹೇಳಿದರು.

Food Minister Gopalaiah
ಆಹಾರ ಸಚಿವ ಗೋಪಾಲಯ್ಯ
author img

By

Published : Apr 29, 2020, 9:20 PM IST

ಧಾರವಾಡ: ನಾನು ರೈತ ಕುಟುಂಬದಿಂದ ಬಂದವನು. ಹಾಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತುಂಬಾ ಜವಾಬ್ದಾರಿಯುತವಾದ ಈ ಖಾತೆ ಕೊಟ್ಟಿದ್ದಾರೆ.‌ ಈ ನಿಟ್ಟಿನಲ್ಲಿ ಬಡವರ ಕೈಗೆ ಪಡಿತರ ಸೇರಿದಾಗಲೇ ನನಗೆ ತೃಪ್ತಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಗೋಪಾಲಯ್ಯ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎರಡೂವರೆ ತಿಂಗಳಿನಿಂದ ಕೆಲಸ ಮಾಡುತ್ತಿರುವೆ.‌ ಈ ಖಾತೆಯಲ್ಲಿ ಇರೋವರೆಗೂ ಇದೇ ರೀತಿಯ ಕೆಲಸ ಮಾಡುವೆ. ಇಡೀ ರಾಜ್ಯಾದ್ಯಂತ ಪ್ರವಾಸ ಮಾಡುವೆ. ಯಾವ ಜಿಲ್ಲೆಯಿಂದ ದೂರು ಬಂದರೂ ಆಯಾ ಜಿಲ್ಲೆಗೆ ಭೇಟಿ ಕೊಡುವೆ ಎಂದು ಭರವಸೆ ನೀಡಿದರು.

ಆಹಾರ ಸಚಿವ ಗೋಪಾಲಯ್ಯ

ಮೇ ತಿಂಗಳು 1.27 ಕೋಟಿ ಕಾರ್ಡ್‌ದಾರರಿಗೆ ಪಡಿತರ ನೀಡಲಿದ್ದೇವೆ. 10 ಕೆ.ಜಿ ಅಕ್ಕಿ, 1 ಕೆ.ಜಿ ಬೇಳೆ ಕೊಡಲಿದ್ದೇವೆ. ಈ ಪ್ರಯುಕ್ತವಾಗಿಯೇ ಸಭೆಗಳನ್ನು ಮಾಡುತ್ತಿದ್ದೇನೆ. ಈ ಸಂಬಂಧ ಅನೇಕ‌ ತಂಡಗಳನ್ನು ರಚಿಸಲಿದ್ದೇವೆ. ಇದು ಜನರಿಗೆ ಉಚಿತವಾಗಿ‌ ಮುಟ್ಟಬೇಕು. ಪ್ರಧಾನಿ ಆದೇಶದ ಮೇರೆಗೆ ಎರಡು ತಿಂಗಳ ಪಡಿತರ ನೀಡಲಿದ್ದೇವೆ ಎಂದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.