ಧಾರವಾಡ: ಸೂಪರ್ ಮಾರ್ಕೆಟ್ನಲ್ಲಿ ಅನಧಿಕೃತ ಅಂಗಡಿ ತೆರವುಗೊಳಿಸಲು ಮಹಾನಗರ ಪಾಲಿಕೆ ಸಿಬ್ಬಂದಿಯೊಂದಿಗೆ ಬಂದಿದ್ದ ಪೊಲೀಸರ ಮೇಲೆ ವ್ಯಕ್ತಿಯೊಬ್ಬ ಪೆಟ್ರೋಲ್ ಎರಚಿ, ತನ್ನ ಮೇಲೆ ಕೂಡ ಪೆಟ್ರೋಲ್ ಸುರಿದುಕೊಂಡು ಹುಚ್ಚಾಟ ಮಾಡಿದ ಘಟನೆ ನಡೆಯಿತು.
ಸೂಪರ್ ಮಾರ್ಕೆಟ್ ವ್ಯಾಪಾರಿಗಳ ಪರ ವಕೀಲ ಎಂ.ಎಂ. ಚೌಧರಿ ಎಂಬಾತ ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿ, ಎಸಿಪಿ ಜಿ. ಅನುಷಾ ಮೇಲೆ ಪೆಟ್ರೋಲ್ ಎರಚಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಮೇಲೂ ಸಹ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಆರೋಪಿಯ ಹೈಡ್ರಾಮಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.