ETV Bharat / state

ನನ್ನ ಬಗ್ಗೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತಿದೆ : ನಟ ಧನ್ವೀರ್ - ಅಭಿಮಾನಿಗೆ ಹೊಡೆದ ಆರೋಪದಲ್ಲಿ ಕನ್ನಡ ನಟ ಧನ್ವೀರ್

ಧನ್ವೀರ್ ಅವರನ್ನು ನೋಡುತ್ತಿದ್ದಂತೆ ಚಂದ್ರಶೇಖರ್ ಸ್ನೇಹಿತ ಸೆಲ್ಫಿ ಕೇಳಲು ಹೋಗಿದ್ದಾನೆ. ಸ್ನೇಹಿತನಿಗೆ ಚಂದ್ರಶೇಖರ್, ಊರಿಗೆ ಹೋಗಲು ತಡವಾಗುತ್ತದೆ. ಬೆಳಗ್ಗೆ ಫೋಟೊ ತೆಗೆಸಿಕೊಳ್ಳುವಂತೆ ಬಾ ಎಂದು ಹೇಳಿದ್ದಾನೆ. ಆಗ ಧನ್ವೀರ್ ಚಂದ್ರಶೇಖರ್​ಗೆ, ನೀವು ಕನ್ನಡ ಬೆಳೆಸುವುದಿಲ್ಲ ಎಂದು ಹೇಳಿದ್ದಾರೆ. ಇದಾದ ನಂತರ ಇಷ್ಟೆಲ್ಲಾ ಬೆಳವಣಿಗೆ ಕಂಡು ಬಂದಿದೆ..

ನನ್ನ ಬಗ್ಗೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದ ನಟ ಧನ್ವೀರ್

author img

By

Published : Feb 20, 2022, 4:35 PM IST

ಹುಬ್ಬಳ್ಳಿ : ಕೆಲವು ಕಿಡಿಕೇಡಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನಟ ಧನ್ವೀರ್ ಆರೋಪಿಸಿದ್ದಾರೆ. ಅಭಿಮಾನಿಯ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನಾನು ನನ್ನ ಚಿತ್ರದ ಪ್ರಚಾರಕ್ಕೆ ಈಗ ಹುಬ್ಬಳ್ಳಿಗೆ ಆಗಮಿಸಿದ್ದೇ‌ನೆ‌.

ಹೀಗಾಗಿ, ಆ ಘಟನೆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು. ಕೆಲವು ಕಿಡಿಕೇಡಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಯಾರು ಮಾಡುತ್ತಿದ್ದಾರೆ ಅಂತಾ ನನಗೆ ಗೊತ್ತು. ಘಟನೆ ಬಗ್ಗೆ ಎಲ್ಲಾ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದೇನೆ. ಎಲ್ಲದಕ್ಕೂ ಬೆಂಗಳೂರಿನಲ್ಲಿ ಉತ್ತರ ನೀಡುತ್ತೇನೆ ಎಂದರು.

ತಮ್ಮ ಮೇಲೆ ಕೇಳಿ ಬಂದಿರುವ ಹಲ್ಲೆಯ ಆರೋಪದ ಬಗ್ಗೆ ನಟ ಧನ್ವೀರ್ ಪ್ರತಿಕ್ರಿಯೆ ನೀಡಿರುವುದು..

ಹೆಚ್ಚಿನ ಓದಿಗೆ: ಬೈ ಟೂ ಲವ್ ಚಿತ್ರದ ನಾಯಕ ಧನ್ವೀರ್​​​​ಗೌಡನಿಂದ ಅಭಿಮಾನಿ ಮೇಲೆ‌ ಹಲ್ಲೆ ಆರೋಪ

ಏನಿದು ಘಟನೆ? : ಸೆಲ್ಫಿ ವಿಚಾರಕ್ಕೆ ಅಭಿಮಾನಿಯನ್ನು ಹೊಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ನಟನ ವಿರುದ್ಧ ಎಫ್​ಐಆರ್​ ಕೂಡ ದಾಖಲಾಗಿದೆ.

ಅಭಿಮಾನಿ ಚಂದ್ರಶೇಖರ್‌ ಎಂಬುವನಿಗೆ ನಿಂದಿಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಫೆಬ್ರವರಿ 18ರ ಶುಕ್ರವಾರ ಧನ್ವೀರ್ ಅವರ ‘ಬೈಟೂ ಲವ್’ ಚಿತ್ರ ತೆರೆಗೆ ಬಂದಿತ್ತು. ಆ ವೇಳೆ ಅನುಪಮ ಚಿತ್ರಮಂದಿರದ ಬಳಿ ಚಂದ್ರಶೇಖರ್ ಮತ್ತು ಸ್ನೇಹಿತರು ತೆರಳಿದ್ದರು.

ಧನ್ವೀರ್ ಅವರನ್ನು ನೋಡುತ್ತಿದ್ದಂತೆ ಚಂದ್ರಶೇಖರ್ ಸ್ನೇಹಿತ ಸೆಲ್ಫಿ ಕೇಳಲು ಹೋಗಿದ್ದಾನೆ. ಸ್ನೇಹಿತನಿಗೆ ಚಂದ್ರಶೇಖರ್, ಊರಿಗೆ ಹೋಗಲು ತಡವಾಗುತ್ತದೆ. ಬೆಳಗ್ಗೆ ಫೋಟೊ ತೆಗೆಸಿಕೊಳ್ಳುವಂತೆ ಬಾ ಎಂದು ಹೇಳಿದ್ದಾನೆ.

ಆಗ ಧನ್ವೀರ್ ಚಂದ್ರಶೇಖರ್​ಗೆ, ನೀವು ಕನ್ನಡ ಬೆಳೆಸುವುದಿಲ್ಲ ಎಂದು ಹೇಳಿದ್ದಾರೆ. ಇದಾದ ನಂತರ ಇಷ್ಟೆಲ್ಲಾ ಬೆಳವಣಿಗೆ ಕಂಡು ಬಂದಿದೆ. ಹಲ್ಲೆಗೊಳಗಾದ ಚಂದ್ರಶೇಖರ್​ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾನೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.