ಹುಬ್ಬಳ್ಳಿ: ವೈನ್ ಶಾಪ್ಗಾಗಿ ಅನುಮತಿ ಸಂಬಂಧ ಲಂಚ ಪಡೆಯುತ್ತಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಯೊಬ್ಬರು ಎಸಿಬಿ ಬಲೆಗೆ ಬಿದಿದ್ದಾರೆ. ವರೂರು ಗ್ರಾಮ ಪಂಚಾಯಿತಿ ಪಿಡಿಒ ಬಸವರಾಜ್ ಬಡಿಗೇರ್ ಎಂಬುವವರೇ ಎಸಿಬಿ ಬಲೆಗೆ ಬಿದ್ದವರು.
ಇಲ್ಲಿನ ವೈನ್ಸ್ ಶಪ್ವೊಂದನ್ನು ಮುಚ್ಚಿಸಲು ಗ್ರಾಮಸ್ಥರು ಅರ್ಜಿ ಕೊಟ್ಟಿದ್ದರು. ಇದನ್ನೇ ಬಳಸಿಕೊಂಡ ಪಿಡಿಒ ಅರ್ಜಿ ತಿರಸ್ಕಾರ ಮಾಡಲು ವೈನ್ ಶಾಪ್ ಮ್ಯಾನೇಜರ್ ವಿಶಾಲ್ ಕಲಾಲ್ ಎಂಬುವವರಿಗೆ 40 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಆಗ ವಿಶಾಲ್ ಕಲಾಲ್ ಎಸಿಬಿಯ ಮೊರೆ ಹೋಗಿದ್ದರು. ಇಂದು ಹಣ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದಿದ್ದಾನೆ. ಎಸಿಬಿ ಡಿವೈಎಸ್ಪಿ ಬಿಸ್ನಳಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.