ETV Bharat / state

ಅಕ್ರಮ ಆಸ್ತಿ ಗಳಿಕೆ ಆರೋಪ: ಬಸವರಾಜ ಪಾಟೀಲ್ ಸನ್ಮತಿ ಮನೆ ಮೇಲೆ ಎಸಿಬಿ ದಾಳಿ

ಕೌಜಲಗಿ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಸವರಾಜ ಶೇಖರ್ ರೆಡ್ಡಿ ಪಾಟೀಲ್ ಅವರ ಕಲಬುರಗಿ, ಯಾದಗಿರಿ ಹಾಗೂ ಧಾರವಾಡದ ಸನ್ಮತಿ ನಗರದಲ್ಲಿರುವ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎಸಿಬಿ ದಾಳಿ
ಎಸಿಬಿ ದಾಳಿ
author img

By

Published : Mar 16, 2022, 11:29 AM IST

ಧಾರವಾಡ/ಕಲಬುರಗಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿರುವ ಆರೋಪದ ಹಿನ್ನೆಲೆ ಇಂದು ಬೆಳಗ್ಗೆ ಕೌಜಲಗಿ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಸವರಾಜ ಶೇಖರ್ ರೆಡ್ಡಿ ಪಾಟೀಲ್ ಅವರ ಧಾರವಾಡದ ಸನ್ಮತಿ ನಗರದಲ್ಲಿರುವ ಮನೆ ಮೇಲೂ ದಾಳಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಧಾರವಾಡದ ಸನ್ಮತಿ ನಗರದಲ್ಲಿರುವ ಮನೆ ಬಳಿ ಆಗಮಿಸಿರುವ ಎಸಿಬಿ ಅಧಿಕಾರಿಗಳು, ಸದ್ಯಕ್ಕೆ ಮನೆಯಲ್ಲಿ ಯಾರೂ ಇಲ್ಲದ ಹಿನ್ನೆಲೆ ಹೊರಗಡೆ ಕಾಯುತ್ತಿದ್ದಾರೆ. ಬಸವರಾಜ ಪಾಟೀಲ್​ ಬೆಂಗಳೂರಿನಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಸವರಾಜ ಅವರು ಬೆಂಗಳೂರಿನಿಂದ ಧಾರವಾಡಕ್ಕೆ ಬಂದ ಬಳಿಕ ಮನೆ ಲಾಕ್ ಓಪನ್ ಮಾಡಿ, ಬಳಿಕ ಅಧಿಕಾರಿಗಳು ಪರಿಶೀಲನೆ ನಡೆಸಬಹುದು. ಇನ್ನೊಂದೆಡೆ, ಬಸವರಾಜ್​ ಸಂಬಂಧಿಕರನ್ನು ಕರೆಸಿ ಮನೆ ಬಾಗಿಲು ತೆಗೆಯಲು ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಕಲಬುರಗಿಯ ಬಿದ್ದಾಪೂರ ಬಡಾವಣೆಯಲ್ಲಿನ ಮನೆ ಹಾಗೂ ಯಾದಗಿರಿ ಜಿಲ್ಲೆಯ ಶಹಾಪೂರ ಪಟ್ಟಣದಲ್ಲಿರುವ ಮನೆ ಮೇಲೆ ಎಸಿಬಿ ದಾಳಿ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ.

ಇದನ್ನೂ ಓದಿ: ರಾಜ್ಯದ 75 ಕಡೆ ಎಸಿಬಿ ದಾಳಿ.. 18 ಸರ್ಕಾರಿ ಅಧಿಕಾರಿಗಳ ದಾಖಲೆ ಪರಿಶೀಲಿಸುತ್ತಿರುವ ACB ಸಿಬ್ಬಂದಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.