ಹುಬ್ಬಳ್ಳಿ : ಧಾರವಾಡದಲ್ಲಿ ನಡೆದಿದ್ದ ಕ್ರೂಸರ್ ಅಪಘಾತದಲ್ಲಿ ಮೃತಪಟ್ಟವರ ಮನೆಯವರಿಗೆ ಪರಿಹಾರದ ಚೆಕ್ ವಿತರಣೆ ವೇಳೆ ಮಹಿಳೆಯೊಬ್ಬರು ಕುಸಿದು ಬಿದ್ದಿರುವ ಘಟನೆ ನಗರದ ಪ್ರವಾಸಿ ಮಂದಿರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದಿದೆ.
ಕ್ರೂಸರ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರ ವಿತರಣೆ ಮಾಡುತ್ತಿದ್ದ ಸಂದರ್ಭ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಸಿ ಸಿ ಪಾಟೀಲ್, ಹಾಲಪ್ಪ ಆಚಾರ್ ಎದುರು ಮಹಿಳೆಯೊಬ್ಬರಿಗೆ ಮಗನ ನೆನಪಾಗಿ ದುಃಖ ತಡೆಯಲಾರದೆ ಕುಸಿದು ಬಿದ್ದಿದ್ದಾರೆ.
ತಮ್ಮ ಮಗನ ಚೆಕ್ ಪಡೆದುಕೊಳ್ಳುವಾಗ ತಾಯಿ ಸಾವಿತ್ರಿ ಕುಸಿದು ಬಿದ್ದಿದ್ದು, ಅವರಿಗೆ ನೀರು ಕುಡಿಸಿದ ಅಧಿಕಾರಿಗಳು ಸಮಾಧಾನ ಪಡಿಸಿದ್ದಾರೆ. ಕ್ರೂಸರ್ ಅಪಘಾತದಲ್ಲಿ ಮೃತಪಟ್ಟವರ ಪ್ರತೀ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರಧನ ವಿತರಿಸಲಾಗಿದೆ.
ಓದಿ: ಆರೋಪಿಗಳು ದೇಶದ ಯಾವುದೇ ಮೂಲೆಯಲ್ಲಿರಲಿ ಅವರನ್ನು ಹಿಡಿಯುತ್ತೇವೆ : ಡಿ ವಿ ಸದಾನಂದ ಗೌಡ