ಧಾರವಾಡ: ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಖಾಸನೀಸ್ ಸೋದರರಿಗೆ ನಾಲ್ಕು ವರ್ಷದ ಬಳಿಕ ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದೆ.
ಜಿಲ್ಲೆಯ ಕಲಘಟಗಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮೂವರು ಸಹೋದರರು ಜೈಲು ಸೇರಿದ್ದರು. ನಾಲ್ಕು ವರ್ಷದ ಜೈಲುವಾಸದ ಬಳಿಕ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಕಲಘಟಗಿ ಮೂಲದ ಸತ್ಯಬೋಧ ಅಲಿಯಾಸ್ ಹರ್ಷ ಖಾಸನೀಸ್, ಸಂಜೀವ ಮತ್ತು ಶ್ರೀಕಾಂತ ಜಾಮೀನು ಪಡೆದ ಸೋದರರಾಗಿದ್ದಾರೆ.
ಮೂವರು ಸಹೋದರರು ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಹರ್ಷ ಎಂಟರ್ಟೈನ್ಮೆಂಟ್ ಹೆಸರಿನಲ್ಲಿ ಜನರಿಗೆ ಬಹು ಕೋಟಿ ವಂಚನೆ ಮಾಡಿ 2017ರ ಬಂಧನಕ್ಕೊಳಗಾಗಿದ್ದರು. ಜನರಿಂದ ಪಡೆದ ಹಣ ವಿವಿಧೆಡೆ ತೊಡಗಿಸಿ ವಂಚನೆ ಮಾಡಿದ್ದರು. ಏಕಕಾಲಕ್ಕೆ ಹತ್ತು ಸಿನಿಮಾ ನಿರ್ಮಾಣ ಘೋಷಿಸಿ ಸುದ್ದಿಯಾಗಿದ್ದರು.
ವಂಚನೆ ಬಳಿಕ ಕಲಘಟಗಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಅನ್ವಯ ಬಂಧನಕ್ಕೊಳಗಾಗಿದ್ದರು. ನಾಲ್ಕು ವರ್ಷ ಸುದೀರ್ಘ ಜೈಲುವಾಸದ ಬಳಿಕ ಷರತ್ತು ಬದ್ಧ ಜಾಮೀನು ಮಂಜೂರಿ ಮಾಡಿದೆ.
ಓದಿ: Bengaluru sexual harassment: ಯುವತಿ ಮೇಲೆ ಸ್ನೇಹಿತರಿಂದಲೇ ಅಟ್ಟಹಾಸ.. ಲೈಂಗಿಕ ವಿಕೃತಿ ಮೆರೆದವರು ಅರೆಸ್ಟ್