ಹುಬ್ಬಳ್ಳಿ: ಬ್ಯಾಂಕ್ ಖಾತೆಯ ಕೆವೈಸಿ ಅಪ್ಡೆಟ್ ಮಾಡಬೇಕು ಎಂದು ನಂಬಿಸಿ 35 ಸಾವಿರ ರೂ. ವಂಚಿಸಿದ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಉಣಕಲ್ ಗ್ರಾಮದ ಓಂ ನಗರದ ಅನಂತಪ್ರೇಮ್ ನಿವಾಸಿ ಸಚಿನ್ ಮಿರಜಕರ್ ಎಂಬಾತರಿಗೆ ಅಪರಿಚಿತ ವ್ಯಕ್ತಿ ಖಾತೆ ಬಂದಾಗುತ್ತದೆ, ಅಪಡೆಟ್ ಮಾಡಬೇಕು ಎಂದು ಸಂದೇಶ ಕಳುಹಿಸಿ ಇದರಲ್ಲಿರುವ ನಂಬರ್ಗೆ ಕರೆ ಮಾಡಿ ಎಂದಿದ್ದಾನೆ.
ಇದನ್ನು ನಂಬಿದ ಸಚಿನ್ ಅವರು ಕರೆ ಮಾಡಿದ್ದು, ಎದುರಿನ ಅಪರಿಚಿತ ವ್ಯಕ್ತಿ ಮಾತನಾಡಿ ನಿಮ್ಮ ಖಾತೆ ಸ್ಥಗಿತವಾಗುತ್ತದೆ ಅಪ್ಡೇೆಟ್ ಮಾಡಬೇಕು ಆದರಿಂದ ಬ್ಯಾಂಕ್ ಖಾತೆಯಲ್ಲಿರುವಂತೆ ಹೆಸರು, ಡೆಬಿಟ್ ಕಾರ್ಡ್ ಮತ್ತು ಒಟಿಪಿ ಸಂಖ್ಯೆ ಪಡೆದುಕೊಂಡಿದ್ದಾನೆ. ನಂತರ ತನ್ನ ಮೊಬೈಲ್ ನಂಬರ್ ಅನ್ನು ಪರಿವರ್ತಿಸಿ ಸಚಿನ್ ಅವರ ಖಾತೆಯಿಂದ 35 ಸಾವರಿ ರೂ ಹಣವನ್ನು ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ದಾಖಲಿಸಿಲಾಗಿದೆ.
ಸಾಕಷ್ಟು ಬಾರಿ ಬ್ಯಾಂಕ್ಗಳೇ ನಾವು ಕೆವೈಸಿ ಅಥವಾ ಇನ್ಯಾವುದೆ ಅಕೌಂಟ್ಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಕರೆ ಅಥವಾ ಸಂದೇಶ ಕಳುಹಿಸುವುದಿಲ್ಲ. ಒಟಿಪಿಗಳನ್ನು ಕೇಳುವುದಿಲ್ಲ ಎಂದು ಸಂದೇಶ ಕಳುಹಿಸಿ ಜಾಗೃತಿ ಮೂಡಿಸುತ್ತಿರುತ್ತಾರೆ. ಆದರೂ ಈ ಆನ್ಲೈನ್ ಖದೀಮರ ಬಲಗೆ ಬಿದ್ದು ಹಣಕಳೆದುಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗದಿರುವುದು ದುರಾದೃಷ್ಟ ಸಂಗತಿಯಾಗಿದೆ.
ಇದನ್ನೂ ಓದು: ಲಾಭದ ಆಮಿಷವೊಡ್ಡಿ ಹುಬ್ಬಳ್ಳಿಯ ಉದ್ಯಮಿಗೆ 32 ಲಕ್ಷ ರೂ. ವಂಚನೆ
ಎಸ್ಬಿಐ ಯೊನೊ ಆ್ಯಪ್ ಅಪ್ಡೇಟ್ ನೆಪ: ಹುಬ್ಬಳಿಯ ಮಹಿಳೆಗೆ ಲಕ್ಷಾಂತರ ರೂ. ವಂಚನೆ