ಹುಬ್ಬಳ್ಳಿ: ಎಮ್ಮೆ ತೊಳೆಯಲು ಹೋಗಿದ್ದ ವ್ಯಕ್ತಿಯೊರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಕುರಡಿಕೇರಿ ಗ್ರಾಮದ ಕೆಂಪಗೇರಿ ಕೆರೆಯಲ್ಲಿ ನಡೆದಿದೆ.
ಕುಂದಗೋಳ ತಾಲೂಕಿನ ಕೋಳಿವಾಡ ಗ್ರಾಮದ ಯಲ್ಲಪ್ಪ ಫಕ್ಕಿರಪ್ಪ ಶಿರಗುಪ್ಪಿ (45) ಮೃತ ವ್ಯಕ್ತಿ. ಈತ ತನ್ನ ಅಕ್ಕನ ಮನೆಗೆ ಬಂದಿದ್ದ ವೇಳೆಯಲ್ಲಿ ಎಮ್ಮೆ ತೊಳೆಯಲು ಕೆರೆಗೆ ತೆರಳಿದ್ದ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.