ETV Bharat / state

ಹುಬ್ಬಳ್ಳಿ: ಮಹಿಳೆಯರಿಗೆ ರಿಯಾಯಿತಿ ಆಸೆ ತೋರಿಸಿ ಲಕ್ಷಾಂತರ ರೂ ಮೋಸ ಮಾಡಿದ ಕಂಪನಿ.. ಆರೋಪ

Cheating Case: ಖಾಸಗಿ ಕಂಪನಿಯಿಂದ ಹಣ ಕಳೆದುಕೊಂಡ ಮಹಿಳೆಯರು ನ್ಯಾಯಕ್ಕಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

Hubli Circle
ಹುಬ್ಬಳ್ಳಿ ಸರ್ಕಲ್​
author img

By

Published : Jul 22, 2023, 7:26 PM IST

Updated : Jul 22, 2023, 9:28 PM IST

ಮಹಿಳೆಯರಿಗೆ ರಿಯಾಯಿತಿ ಆಸೆ ತೋರಿಸಿ ಲಕ್ಷಾಂತರ ರೂ ಮೋಸ ಮಾಡಿದ ಕಂಪನಿ

ಹುಬ್ಬಳ್ಳಿ: ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ ಎನ್ನುವ ಮಾತಿದ್ದಂತೆ ಇದೀಗ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಹಣ ಹೂಡಿಕೆ ಮಾಡುವ ಮೂಲಕ ದುಪ್ಪಟ್ಟು ಲಾಭ ಪಡೆಯಲು ಹೋಗಿ ಮಹಿಳೆಯರೇ ಕೈ ಸುಟ್ಟುಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಹುಬ್ಬಳ್ಳಿಯ ಗಿರಿಜಾ ಹಿರೇಮಠ ಹಾಗೂ ವಿಜೇತಾ ಅವರು ತಮಗಾದ ಮೋಸದ ಬಗ್ಗೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಕಂಪನಿಯೊಂದಕ್ಕೆ 16,11,982 ಹಾಗೂ 2,00,000 ರೂಪಾಯಿ ಹಣವನ್ನು ಬ್ಯಾಂಕ್ ಮೂಲಕ ವರ್ಗಾವಣೆ ಮಾಡುವ ಮೂಲಕ ವಂಚನೆಗೆ ಒಳಗಾಗಿದ್ದಾರೆ. ಕಂಪನಿಯ ಮರುಳು ಮಾತುಗಳಿಗೆ ಹಾಗೂ ಗ್ರಾಸರಿ ಪ್ರಾಡಕ್ಟ್​ಗಳಿಗೆ ಶೇ 33% ರಿಯಾಯಿತಿ ಆಸೆಗೆ ಬಿದ್ದು, ಒಬ್ಬ ಮಹಿಳೆ 17 ಲಕ್ಷ ಮತ್ತೊಬ್ಬ ಮಹಿಳೆ 2 ಲಕ್ಷ ರೂಪಾಯಿ ಹಣವನ್ನು ಬಂಡವಾಳ ಹೂಡಿದ್ದರು.

ಹುಬ್ಬಳ್ಳಿಯ ನಾಲ್ಕೈದು ಕಡೆಗಳಲ್ಲಿ ಕಂಪನಿ ಮಳಿಗೆಗಳನ್ನು ತೆರೆದಿದ್ದು, ಜನ ಖರೀದಿಸುವ ಉತ್ಪನ್ನಗಳ ಮೇಲೆ ಭಾರೀ ಪ್ರಮಾಣದಲ್ಲಿ ರಿಯಾಯಿತಿ ನೀಡುವುದರ ಜೊತೆಗೆ ಹೊಸ ಔಟ್​ಲೆಟ್​ಗಳನ್ನು ಮಾಡಿದರೆ, ಇಂತಿಷ್ಟು ಮಾಸಿಕ ಲಾಭ ನೀಡುವುದಾಗಿ ಜನರನ್ನು ‌ನಂಬಿಸಿದ್ದಾರೆ. ಇದರ ಆಸೆಗೆ ಬಿದ್ದ ಸಾಕಷ್ಟು ಜನ ಹಣವನ್ನು ಹೂಡಿಕೆ ಮಾಡಿದ್ದಾರೆ. ಪ್ರಾರಂಭದಲ್ಲಿ ಹಣ ಹೂಡಿಕೆ ಮಾಡಿದವರಿಗೆ ಪ್ರಾಡಕ್ಟ್​ಗಳನ್ನು ಕೊಟ್ಟಿದ್ದು, ನಂತರದಲ್ಲಿ ಕಂಪನಿಯವರು ಉತ್ಪನ್ನಗಳನ್ನು ಕೊಡದೇ ಎಸ್ಕೇಪ್​ ಆಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕಂಪನಿಯವರು ಉತ್ಪನ್ನಗಳ ಮಾರಾಟಕ್ಕಾಗಿ ದೊಡ್ಡ ದೊಡ್ಡ ಹೋಟೆಲ್​ಗಳಲ್ಲಿ ಹಾಗೂ ಕಟ್ಟಡಗಳಲ್ಲಿ ಬಾಡಿಗೆಗೆ ಕೊಠಡಿ ಪಡೆದು ಅಂಗಡಿ ಇಟ್ಟಿದ್ದರು. ಸಾಮಾನ್ಯ ಜನರ ಹಣ ಹೊಡೆದುಕೊಂಡು ಈಗ ಅಂಗಡಿ ಖಾಲಿ ಮಾಡಿಕೊಂಡು ಹೋಗಿ ಜನರಿಗೆ ಮೋಸ ಮಾಡಿದ್ದಾರೆ. ಹಣ ಹೂಡಿಕೆ ಮಾಡಿ ಈಗ ವಂಚನೆಗೊಳಗಾದ ಮಹಿಳೆಯರು ನ್ಯಾಯಕ್ಕಾಗಿ ಆರಕ್ಷಕರ ಮೊರೆ ಹೋಗಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿರುವ ವಂಚನೆಗೊಳಗಾಗಿರುವ ಮಹಿಳೆಯರು, ಹುಬ್ಬಳ್ಳಿ ಹಾಗೂ ಧಾರವಾಡ ಅವಳಿ ನಗರಗಳಲ್ಲಿ ಸಾವಿರಾರು ಜನರು ವಂಚನೆಗೆ ಒಳಗಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರೆಲ್ಲರೂ ಕೋಟ್ಯಂತರ ರೂಪಾಯಿ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ಇನ್ನೂ ಕೆಲವರು ವಂಚನೆಗೊಳಗಾದರೂ ಮಾಧ್ಯಮಗಳ ಮುಂದೆ ಬರಲು ಹಿಂದೇಟು ಹಾಕುತ್ತಿದ್ದು, ಕೆಲವು ತಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

ಈ ಕುರಿತು ಹುಬ್ಬಳ್ಳಿ ಧಾರವಾಡ ಪೊಲೀಸ್​ ಕಮಿಷನರೆಟ್​ ಸೈಬರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್​ ಕಮಿಷನರ್​ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮಹಿಳೆಯರಿಗೆ ನ್ಯಾಯ ಒದಗಿಸುವುದರ ಜೊತೆಗೆ, ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ.

ಇದನ್ನೂ ಓದಿ: Davanagere crime: ಕೆಲಸ ಕೊಡಿಸುವುದಾಗಿ ಯುವಕನಿಗೆ ₹4.73 ಲಕ್ಷ ವಂಚನೆ.. ಲಾಭಾಂಶ ನೀಡುವುದಾಗಿ ಯುವತಿಗೆ ₹ 4.58 ಲಕ್ಷ ಪಂಗನಾಮ

Last Updated : Jul 22, 2023, 9:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.