ಹುಬ್ಬಳ್ಳಿ; ಜಿಲ್ಲೆಯ ಗಣೇಶ ನಿಮಜ್ಜನ ವೇಳೆ ಐದು ಕಡೆ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 9 ಜನ ಆರೋಪಿಗಳನ್ನು ಬಂಧಿಸಲಾಗಿದೆ. ದುರ್ಗದ ಬೈಲ್ನಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಆಲ್ತಾಪ್ ಕಲಾದಗಿ (22), ಇರ್ಫಾನ್ ಕಲಾದಗಿ (22), ಲಿಯಾಖಿತ್ ಅಲಿ ಬಿಸ್ತಿ, ಜಾಫರ್ ಸಾಧಿಕ್ ಬಂಧಿತರು. ಇವರೆಲ್ಲರೂ ಅಂಬೇಡ್ಕರ್ ಕಾಲೋನಿ ಹಾಗೂ ಕೇಶ್ವಾಪುರದ ನಿವಾಸಿಗಳಾಗಿದ್ದಾರೆ.
ಇನ್ನು ಮೇದಾರ್ ಓಣಿಯಲ್ಲಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಅಮೃತ ಕಬಾಡೆ(21), ಅಮೃತ ತಂದೆ, ಅನಂತಸಾ ಬಾಂಡೆಗೆ ಬಂಧಿತರು. ಇವರು ನೇಕಾರ ನಗರದ ನಿವಾಸಿಗಳಾಗಿದ್ದಾರೆ.
ನಿನ್ನೆ ಅಜ್ಮೀರ ನಗರದಲ್ಲಿ ನಡೆದ ಚಾಕು ಇರಿತ ಪ್ರಕರಣ ಸಂಬಂಧ ಪ್ರಶಾಂತ ಬಂಕಾಪುರ ಎಂಬಾತನನ್ನ ಬಂಧಿಸಿಸಲಾಗಿದೆ. ದಾಜೀಬಾನ್ ಪೇಟೆಯಲ್ಲಿ ನಡೆದ ಚಾಕು ಇರಿತ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ರವಿ ಕಾಟಗಾರ (29), ರಾಹುಲ್ ಬಾಂಡಗೆ (21) ಬಂಧಿತರು. ಇವರು ನೇಕಾರ ನಗರದ ನಿವಾಸಿಗಳು.
ಮೇಲ್ನೋಟಕ್ಕೆ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿಯಲಾಗಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿದೆ. ಈ ಸಂಬಂಧ ಉಪನಗರ ಹಾಗೂ ಶಹರ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.