ಧಾರವಾಡ : ಇಲ್ಲಿನ ಟಾಟಾ ಮಾರ್ಕೊಪೋಲೊ ಕಂಪನಿಯಲ್ಲಿ ಈವರೆಗೆ ಬರೋಬ್ಬರಿ 53 ಉದ್ಯೋಗಿಗಳಿಗೆ ಸೋಂಕು ತಗುಲಿದೆ.
ಗರಗ ರಸ್ತೆಯಲ್ಲಿರುವ ಈ ಕಂಪನಿಯಲ್ಲಿ ಸುಮಾರು 3000ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕಂಪನಿಯಲ್ಲಿ ಸುಮಾರು 53 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಗ್ರಾಮೀಣ ಭಾಗದಿಂದ ಬಹುಸಂಖ್ಯೆಯ ಕಾರ್ಮಿಕರು ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರಿಗೆ, ಸ್ಥಳೀಯ ಶಾಸಕ ಅಮೃತ್ ದೇಸಾಯಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.
ಅಚ್ಚರಿ ಅಂದ್ರೆ ಕಾರ್ಮಿಕರ ಆರೋಗ್ಯ ಹಾಗೂ ಹಿತ ಕಾಯಬೇಕಾದ ಕಂಪನಿ ಈಗ ಬೇಜವಾಬ್ದಾರಿತನ ತೋರುತ್ತಿದೆ ಎಂಬ ಆರೋಪ ಕೇಳಿ ಬರುತ್ತಿವೆ. ಅಲ್ಲದೆ ಸುತ್ತ-ಮುತ್ತಲಿನ ಹಳ್ಳಿಗಳಿಗೆ ಸೋಂಕು ಆವರಿಸುವ ಆತಂಕವಿದೆ. ಜಿಲ್ಲಾಡಳಿತ ಸುತ್ತಮುತ್ತಲಿನ ಹಳ್ಳಿ ಹಾಗೂ ಕಂಪನಿ ನೌಕರರ ಹಿತ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.