ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯದ ನೌಕರನೊಬ್ಬ ದಾಖಲೆಯ ರಕ್ತದಾನ ಮಾಡಿ, ತಮ್ಮ ಸಾಮಾಜಿಕ ಸೇವೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ.
ರೈಲ್ವೆ ಬೋಗಿಗಳನ್ನು ಪರಿಶೀಲಿಸುತ್ತಿರುವ ಇವರ ಹೆಸರು ಪ್ರಕಾಶ ಕೆ. ನೈರುತ್ಯ ರೈಲ್ವೆ ವಲಯದ ಸಿಡಬ್ಲೂ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು, 32 ಬಾರಿ ರಕ್ತದಾನ ಮಾಡಿದ್ದಾರೆ. ಅತಿ ತುರ್ತು ಹಾಗೂ ರಕ್ತದ ಅವಶ್ಯಕೆ ಇದೆ ಎಂದು ಇವರಿಗೆ ಕರೆ ಮಾಡಿದರೆ ಸ್ವಯಂಪ್ರೇರಿತವಾಗಿ ತೆರಳಿ ರಕ್ತದಾನ ಮಾಡಿದ್ದಾರೆ.
ರಕ್ತದಾನ ಮಹಾದಾನ ಎಂದು ನಂಬಿರುವ ಇವರು, 2007ರಿಂದ ರಕ್ತದಾನ ಮಾಡಲು ಆರಂಭಿಸಿದ್ದಾರೆ. ಎನ್ಸಿಸಿಯಲ್ಲಿ ಇರುವಾಗಿನಿಂದ ಈ ಕಾರ್ಯ ಆರಂಭವಾಗಿದೆ.
3, 6 ತಿಂಗಳು ಒಮ್ಮೆ ರಕ್ತದಾನ ಮಾಡುತ್ತ ಬಂದಿದ್ದಾರೆ. ನೈರುತ್ಯ ರೈಲ್ವೆ ವಲಯದ ಸಿಬ್ಬಂದಿಯು ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಕೂಡ ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.