ಧಾರವಾಡ : ಕೊರೊನಾಗೆ ಒಂದೇ ಕುಟುಂಬದ ಮೂವರು ಬಲಿಯಾಗಿರುವ ಘಟನೆ ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ನಡೆದಿದೆ. ತಾಯಿ ಹಾಗೂ ಇಬ್ಬರು ಗಂಡು ಮಕ್ಕಳು ಕೊರೊನಾಗೆ ಬಲಿಯಾಗಿದ್ದಾರೆ.
ಎರಡು ದಿನಗಳ ಹಿಂದೆ ತಾಯಿ ಮೃತಪಟ್ಟಿದ್ದು, ಇಂದು ಇಬ್ಬರು ಗಂಡು ಮಕ್ಕಳು ಕೊರೊನಾದಿಂದ ಕೊನೆಯುಸಿರೆಳೆದಿದ್ದಾರೆ. ನಾಗಪ್ಪ ಕಡ್ಲಿ (45), ಕಲ್ಲಪ್ಪ ಕಡ್ಲಿ (50) ಮತ್ತು ತಾಯಿ ಶಾಂತವ್ವ ಕಡ್ಲಿ (85) ಕೊರೊನಾಗೆ ಬಲಿಯಾದವರು.
ಹಾರೋಬೆಳವಡಿ ಗ್ರಾಮದಲ್ಲಿ ಕೊರೊನಾಗೆ ಒಟ್ಟು ನಾಲ್ಕು ಜನ ಬಲಿಯಾಗಿದ್ದಾರೆ. ಈ ಗ್ರಾಮದಲ್ಲಿ ಸದ್ಯ 5 ಪಾಸಿಟಿವ್ ಪ್ರಕರಣಗಳಿವೆ.
ಕೊರೊನಾಗೆ ಮೂವರು ಬಲಿಯಾಗುತ್ತಿದ್ದಂತೆ ಎಚ್ಚೆತ್ತ ಗ್ರಾಪಂ ಸಿಬ್ಬಂದಿ ಗ್ರಾಮದ ಪ್ರತಿ ವಾರ್ಡ್ಗಳನ್ನು ಸ್ಯಾನಿಟೈಸ್ ಮಾಡುತ್ತಿದ್ದಾರೆ. ಒಂದೇ ಕುಟುಂಬದ ಮೂವರು ಬಲಿಯಾಗುತ್ತಿದಂತೆ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.