ETV Bharat / state

ಎರಡನೇ ಹಂತದ ಮತದಾನಕ್ಕೆ ಕ್ಷಣಗಣನೆ; ಹಲವಡೆ ಅವಿರೋಧ ಆಯ್ಕೆ - ಮತದಾನ 2020

ಹುಬ್ಬಳ್ಳಿ, ಕುಂದಗೋಳ, ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕು ವ್ಯಾಪ್ತಿಯಲ್ಲಿ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. 1032 ಗ್ರಾಪಂ ಸದಸ್ಯರ ಸ್ಥಾನಗಳಲ್ಲಿ ಒಟ್ಟು 2974 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಹಲವರು ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಕೆಲವಡೆ ಅವಿರೋಧ ಆಯ್ಕೆ ಮಾಡಲಾಗಿದೆ.

2nd phase gram panchayat election in Hubballi
ಹಂತದ ಮತದಾನ
author img

By

Published : Dec 27, 2020, 4:21 AM IST

ಹುಬ್ಬಳ್ಳಿ: ಹುಬ್ಬಳ್ಳಿ, ಕುಂದಗೋಳ, ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕು ವ್ಯಾಪ್ತಿಯಲ್ಲಿ ಇಂದು ಗ್ರಾಪಂ ಸಾರ್ವತ್ರಿಕ ಚುನಾವಣೆಗೆ ಜರುಗಲಿದೆ.

ಒಟ್ಟು 71 ಗ್ರಾಪಂ ಗಳ 385 ಮತಕ್ಷೇತ್ರಗಳಲ್ಲಿ ಮತದಾನ ಜರುಗಲಿದೆ‌. 165319 ಪುರುಷ, 157723 ಮಹಿಳೆ, 5 ಇತರೆ ಮತದಾರರು ಮತ ಚಲಾಯಿಸಲಿದ್ದಾರೆ. 1032 ಗ್ರಾಪಂ ಸದಸ್ಯರ ಸ್ಥಾನಗಳಲ್ಲಿ 2974 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 62 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ. 469 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

80 ಚುನಾವಣೆ ಅಧಿಕಾರಿ, 86 ಸಹಾಯಕ ಚುನಾವಣೆ ಅಧಿಕಾರಿ, 469 ಮತಗಟ್ಟೆ ಅಧ್ಯಕ್ಷಾಧಿಕಾರಿ, 469 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ 938 ಮತಗಟ್ಟೆ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 2063 ಸಿಬ್ಬಂದಿಯನ್ನು ಕಾಯ್ದಿರಿಸಲಾಗಿದೆ. 35 ಸೆಕ್ಟರ್ 105 ರೂಟ್ ಗುರುತಿಸಲಾಗಿದೆ. 61 ಸಾರಿಗೆ ಬಸ್ ಸೇರಿದಂತೆ ಇತರೆ 113 ವಾಹನಗಳನ್ನು ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಗೆ 2 ರಂತೆ 938 ಆರೋಗ್ಯ ಸಿಬ್ಬಂದಿ ನೇಮಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.