ETV Bharat / state

ಹುಬ್ಬಳ್ಳಿಯಲ್ಲಿ ಇದೇ 20ರಿಂದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ... ಬಾನಲ್ಲಿ 26 ದೇಶಗಳ ಸ್ಪರ್ಧಿಗಳ ಚಮತ್ಕಾರ

ಹುಬ್ಬಳ್ಳಿಯಲ್ಲಿ ಇದೇ 20ಹಾಗೂ 21ರಂದು 2020 ಅಂತರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಗಾಳಿಪಟ ಉತ್ಸವ
ಗಾಳಿಪಟ ಉತ್ಸವ
author img

By

Published : Jan 16, 2020, 5:16 PM IST

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ಹಾಗೂ ಕ್ಷಮತಾ ಸಮಿತಿ ವತಿಯಿಂದ 2020 ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಇದೇ 20ಹಾಗೂ 21ರಂದು ನಗರದ ಆಕ್ಸ್‌ಫರ್ಡ್ ಕಾಲೇಜ್​ ಬಳಿಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು, ಕ್ಷಮತಾ ಸೇವಾ ಸಂಸ್ಥೆ ಸಂಯೋಜಕರಾದ ಗೋವಿಂದ ಜೋಶಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಗಾಳಿಪಟ ಉತ್ಸವ ಆಯೋಜಿಸಲಾಗಿದ್ದು, 26 ದೇಶಗಳ 32 ಆಟಗಾರರು ಹಾಗೂ ಭಾರತದ 18 ಖ್ಯಾತ ಗಾಳಿಪಟ ಆಟಗಾರರು ತಮ್ಮ ವೈಶಿಷ್ಟ್ಯ ಪೂರ್ಣ ಬೃಹತ್ ಗಾಳಿಪಟಗಳನ್ನು ಮುಗಿಲೆತ್ತರಕ್ಕೆ ಹಾರಿಸುವ ಮೂಲಕ ಸಾರ್ವಜನಿಕರನ್ನು ರಂಜಿಸಲಿದ್ದಾರೆ. ಅಷ್ಟೇ ಅಲ್ಲದೇ ಗಾಳಿಪಟ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ ಎಂದು ತಿಳಿಸಿದರು. 21ರಂದು ಗಂಗಾವತಿ ಪ್ರಾಣೇಶ ಅವರ ಹಾಸ್ಯ ಕಾರ್ಯಕ್ರಮವಿರಲಿದೆ. ಎರಡು ದಿನಗಳ ಕಾಲ ನಡೆಯುವ ಈ ಗಾಳಿಪಟ ಉತ್ಸವಕ್ಕೆ 2.5 ಲಕ್ಷ ಜನ ಬರುವ ನಿರೀಕ್ಷೆ ಇದೆ.

2020 ಅಂತರಾಷ್ಟ್ರೀಯ ಗಾಳಿಪಟ ಉತ್ಸವದ ಕುರಿತು ಸುದ್ಧಿಗೋಷ್ಠಿ

Intro:HubliBody:ಹುಬ್ಬಳ್ಳಿ:-ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ಹಾಗೂ ಕ್ಷಮತಾ ಸಮಿತಿಯ ವತಿಯಿಂದ ಸತತ ಮೂರನೇ ಬಾರಿಗೆ ಅಂತರಾಷ್ಟ್ರೀಯ ಗಾಳಿಪಟ ಉತ್ಸವ 2020ನ್ನು ಇದೇ 20ಹಾಗೂ 21ರಂದು ನಗರದ ಆಕ್ಸ್‌ಫರ್ಡ್ ಕಾಲೇಜ ಹತ್ತಿರದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಷಮತಾ ಸೇವಾ ಸಂಸ್ಥೆ ಸಂಯೋಜಕರಾದ ಗೋವಿಂದ ಜೋಶಿ. ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕ್ರಾಂತಿ ಪರ್ವ ಕಾಲದಲ್ಲಿ ನಡೆಯುವ ಪಾರಂಪರಿಕ ಆಟವಾಗಿದ್ದು, ಗಾಳಿಪಟ ಆಟವನ್ನು ನಮ್ಮ ದೇಶವಲ್ಲದೇ ವಿಶ್ವದ ಹಲವಾರು ದೇಶಗಳು ಗಾಳಿಪಟ ಮನರಂಜನೆಯನ್ನು ಆಶ್ವಾದಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಮೋಜು ಭರಿತ ಮನರಂಜನೆಯ ಹಿನ್ನೆಲೆಯಲ್ಲಿ ನಗರದಲ್ಲಿ ಗಾಳಿಪಟ ಉತ್ಸವ ಆಯೋಜಿಸಲಾಗಿದ್ದು, ಉತ್ಸವದಲ್ಲಿ 26 ದೇಶಗಳ 32 ಹಾಗೂ ಭಾರತದ 18 ಖ್ಯಾತ ಗಾಳಿಪಟ ಆಟಗಾರರು ತಮ್ಮ ವೈಶಿಷ್ಟ್ಯ ಪೂರ್ಣ ಬೃಹತ್ ಗಾಳಿಪಟ ಮುಗಿಲೆತ್ತರಕ್ಕೆ ಹಾರಿಸುವ ಮೂಲಕ ಸಾರ್ವಜನಿಕರನ್ನು ರಂಜಿಸಲಿದ್ದಾರೆ, ಅಷ್ಟೇ ಅಲ್ಲದೇ ಗಾಳಿಪಟ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕಗ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗಾಗಿ ಆಟಪಾಠ, ಚಿತ್ರಕಲಾ ಸ್ಪರ್ಧೆ ಹಾಗೂ ಸಂಜೆ ಮನರಂಜನೆ ಕಾರ್ಯಕ್ರಮ ನಡೆಯಲಿವೆ. 21ರಂದು ಗಂಗಾವತಿ ಪ್ರಾಣೇಶ ಅವರ ಹಾಸ್ಯ ಸಂಜೆ ಕಾರ್ಯಕ್ರಮವಿದೆ. ಆಟಪಾಠ ಹಾಗೂ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಗುವುದು ಅಲ್ಲದೇ ಉತ್ಸವದಲ್ಲಿ ಸುಮಾರು 50 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಅಹಾರ ಮಳಿಗೆ, ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೌಸಿ ಹಾಗೂ ಇನ್ನಿತರ ಮೋಜಿನ ಆಟಗಳ ಮಳಿಗೆ ಕೂಡ ಉತ್ಸವದಲ್ಲಿ ಇರಲಿವೆ.ಎರಡು ದಿನಗಳ ಕಾಲ ನಡೆಯುವ ಈ ಗಾಳಿಪಟ ಉತ್ಸವಕ್ಕೆ2.5 ಲಕ್ಷ ಜನ ಬರುವ ನಿರೀಕ್ಷಿದೆ ಇದ್ದು.ಶಾಲಾ ಮಕ್ಕಳಿಗೆ ಉಚಿತ 5 ಸಾವಿರ ಗಾಳಿಪಟಗಳನ್ನು ಉಚಿತ ನೀಡಲಾಗುತ್ತೆ,ಎಂದರು ಸಾರ್ವಜನಿಕರು ಹಾಗೂ ವಿಧ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಗಾಳಿ ಪಡ ಉತ್ಸವವನ್ನು ಯಶಸ್ವಿಗೊಳಿಸಬೇಕು. ಎಂದರು...ನಾಗೇಶ್ ಕಲಬರ್ಗಿ,ತಿಪ್ಪಣ್ಣ ಮಜ್ಜಗಿ,ಸಂತೋಷ ಚೌಹಾಣ,ಶಿವು ಮೆಣಸಿನಕಾಯಿ, ಇನ್ನಿತರರು ಇದ್ದರು.

ಬೈಟ್ : ಗೋವಿಂದ ಜೋಶಿ...ಕ್ಷಮತಾ ಸೇವಾ ಸಂಸ್ಥೆಯ ಟ್ರಸ್ಟಿ.Conclusion:Yallappa kundagol
ETV Bharat Logo

Copyright © 2024 Ushodaya Enterprises Pvt. Ltd., All Rights Reserved.