ಕಲಘಟಗಿ: ತಾಲೂಕಿನ ಹಿರೆಹೊನ್ನಳ್ಳಿಯಲ್ಲಿಂದು ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಹಿರೆಹೊನ್ನಳ್ಳಿ ನಿವಾಸಿ P-15610 ( 27 ವರ್ಷ, ಪುರುಷ) ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ( ಐಎಲ್ ಐ) ಬಳಲುತ್ತಿದ್ದರು. ಸದ್ಯ ಸೋಂಕು ದೃಢಪಟ್ಟಿದ್ದು, ಇವರನ್ನು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಪಿಡಿಒ ಉಮೇಶ್ ಚಿಕ್ಕನ್ನವರ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಸೋಂಕಿತನ ಟ್ರ್ಯಾವೆಲ್ ಹಿಸ್ಟರಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಬೇಕಿದೆ.